ಮುಂಬೈ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಮ್ಎ) ಯ ಏಳು ಜನರ ಕೇಂದ್ರ ತಂಡ ಮಹಾರಾಷ್ಟ್ರದಲ್ಲಿ ಇತ್ತೀಚಿನ ಪ್ರವಾಹದ ಅಂದಾಜು ಮಾಡಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬುಧವಾರ ಹೇಳಿದ್ದಾರೆ.
ಸಂಪುಟ ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರವಾಹದ ನಂತರ 6,813 ಕೋಟಿ ರೂಪಾಯಿ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಪರಿಹಾರ ಮೊತ್ತ ದೊರೆಯುವ ಮುನ್ನವೇ ರಕ್ಷಣಾ ಕಾರ್ಯ ನಡೆದಿದೆ ಎಂದು ಹೇಳಿದರು.
ಎನ್ಡಿಎಮ್ಎ ಜಂಟಿ ಕಾರ್ಯದಶರ್ಿ ನೇತೃತ್ವದ ತಂಡದ ಅಗ್ರ ಅಧಿಕಾರಿಗಳು ಮತ್ತು ಇತರ ಪ್ರಮುಖ ಸಚಿವರು ಪುಣೆ ತಲುಪಿದ್ದು ನಾಲ್ಕು ದಿನಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಅಧ್ಯಯನ ನಡೆಸಲಿದ್ದಾರೆ.
ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ದಾಖಲೆಯ ಮಳೆ ಬಿದ್ದಿದ್ದು ಅನೇಕ ನದಿಗಳು ಅಪಾಯಮಟ್ಟ ಮೀರಿ ಹರಿದಿದ್ದು ಸುಮಾರು ಐದು ಲಕ್ಷ ಜನರು ಸ್ಥಳಾಂತರ ಮಾಡಬೇಕಾಯಿತು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರು ಮತ್ತೆ ಎಂದಿನ ಜೀವನ ನಡೆಸಲು ನೆರವಾಗಲು ತಕ್ಷಣದ ಪರಿಹಾರವಾಗಿ ಗ್ರಾಮೀಣ ಪ್ರದೇಶಗಳಿಗೆ 10 ಸಾವಿರ ರೂ ಹಾಗೂ ನಗರ ಪ್ರದೇಶಗಳಿಗೆ 15 ಸಾವಿರ ರೂ ನೀಡಲು ಸಕರ್ಾರ ನಿರ್ಧರಿಸಲಿದೆ.
ಪ್ರವಾಹಪೀಡಿತ ಪ್ರದೇಶಗಳ ರೈತರ ಎಲ್ಲಾ ಬಗೆಯ ಬ್ಯಾಂಕ್ ಸಾಲ ಕೂಡ ಮನ್ನಾ ಮಾಡುವುದಾಗಿ ಸಕರ್ಾರ ಘೋಷಣೆ ಮಾಡಿದೆ.
ಸದ್ಯ ಅನೇಕ ಪ್ರದೇಶಗಳಲ್ಲಿ ಪರಿಸ್ಥಿತಿ ಸಹಜಸ್ಥಿತಿಯಲ್ಲಿದೆ.