ರಾಮದುರ್ಗ 17: ತಾಲೂಕು ಬರಪೀಡತವೆಂದು ಸರಕಾರ ಆದೇಶ ಹೊರಡಿಸಿದ ಬೆನ್ನಲ್ಲೆ ಶನಿವಾರ ತಾಲೂಕಿಗೆ ಭೇಟಿ ನೀಡಿ ಕೇಂದ್ರ ಬರ ಅಧ್ಯಯನ ತಂಡ, ಆನೆಗುದ್ದಿ ಗ್ರಾಮದ ರೈತನೋರ್ವನ ಜಮೀನಿಗೆ ಭೆೇಟಿ ನೀಡಿ, ಬಂದೆ ಪುಟ್ಟ ಹೋದೆ ಪುಟ್ಟ ಎಂಬಂತೆ ಕಾಟಾಚಾರದ ಬರ ಪರಿಶೀಲನೆ ನಡೆಸಿದಂತಾಯಿತು.
ಮಹೇಶ, ಆರ್. ಕೆ. ರೆಡ್ಡಿ, ನೀತಾ ತಹಿಲಾನಿ ಅವರುಗಳ ನೇತೃತ್ವದ ಕೇಂದ್ರ ತಂಡ, ಆನೆಗುದ್ದಿ ಗ್ರಾಮದ ರೈತ ಕಲ್ಮೇಶ ಪರಪ್ಪ ಹಂಚಿನಾಳ ಅವರ ಜಮೀನಿನಲ್ಲಿ ಮಳೆಯಾಗದೆ ಹಾನಿಗೊಳಗಾದ ಸಜ್ಜೆ ಬೆಳೆ ವೀಕ್ಷಿಸಿ, ಕೃಷಿ ಇಲಾಖೆ ಹಾಗೂ ತಾಲೂಕಾಡಳಿತ ಪರಿಶೀಲಿಸಿ ತಂದ ನಷ್ಟ ಉಂಟಾದ ಸೂರ್ಯಕಾಂತಿ, ಗೋವಿನಜೋಳ, ಶೇಂಗಾ ಬೆಳೆಗಳನ್ನು ಗಮನಿಸಿದರು.
ಹಣಮಾಪೂರ ಗ್ರಾ.ಪಂ ವ್ಯಾಪ್ತಿಯ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೈತರ ಜಮೀನಿನಲ್ಲಿ ನಡೆಯುತ್ತಿರುವ ಒಡ್ಡು ನಿಮರ್ಾಣ ಕಾಮಗಾರಿ ಮಾಡುತ್ತಿರುವ ನರೇಗಾ ಕೂಲಿ ಕಾಮರ್ಿಕರೊಂದಿಗೆ ಸಂವಾದ ನಡೆಸಿದರು.
ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ, ಸಿಇಒ ರಾಮಚಂದ್ರನ್ ಆರ್, ಅಪರ ಜಿಲ್ಲಾಧಿಕಾರಿ ಎಚ್.ಬಿ. ಬೂದೆಪ್ಪ, ಜಂಟಿ ಕೃಷಿ ನಿದರ್ೇಶಕ ಜಿಲಾನಿ ಎಚ್. ಮೊಕಾಶಿ, ಉಪ ಕೃಷಿ ನಿದರ್ೇಶಕ ಸಲೀಂ ಸಂಗ್ರಾಸ ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ತಹಶೀಲ್ದಾರ್ ಆರ್.ವಿ. ಕಟ್ಟಿ, ಸಹಾಯಕ ಕೃಷಿ ನಿದರ್ೇಶಕ ಎಸ್. ಎಫ್. ಬೆಳವಟಗಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಾಲೂಕಿನಲ್ಲಿ ಬಿತ್ತನೆಯಾದ ಸುಮಾರು 51698 ಹೆಕ್ಟರ ಪ್ರದೇಶದಲ್ಲಿ ಬಿತ್ತನೆಯಾದ ಜೋಳ, ಸಜ್ಜೆ, ಗೋವಿನಜೋಳ, ಹೆಸರು, ತೊಗರಿ, ಶೇಂಗಾ, ಸೂರ್ಯಕಾಂತಿ, ಹತ್ತಿ ಬೆಳೆಗಳಲ್ಲಿ 34294 ಹೆಕ್ಬರ್ ಪ್ರದೇಶ ಹಾನಿಯಾದ ಕುರಿತು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.
ಅಳಲು ತೋಡಿಕೊಂಡ ರೈತರುಃ
ಕಳೆದ ನಾಲ್ಕೈದು ವರ್ಷಗಳಿಂದ ಸಕಾಲಕ್ಕೆ ಮಳೆಯಾಗದೇ ಬಿತ್ತಿದ ಬೆಳೆಗಳು ಒಣಗುತ್ತಿವೆ. ಸರಕಾರದಿಂದ ಸಮರ್ಪಕ ಪರಿಹಾರ ದೊರೆತಿಲ್ಲ. ಕಾರಣ ರೈತರಿಗೆ ದಿಕ್ಕು ತೋಚದಂತಾಗುತ್ತಿದೆ. ಬಿತ್ತನೆಗೆ ಮಾಡಿದ ಖಚರ್ು ಸಹ ಮರಳದೇ ಸಾಲ-ಸೂಲ ಮಾಡಿ ಜೀವನ ನಡೆಸುವಂತಾಗಿದೆ. ಫಸಲ್ ಭೀಮಾ ಯೋಜನೆಯಡಿಯಲ್ಲಿ ವಿಮಾ ಕಂತು ಪಾವತಿ ಮಾಡಿದ ರೈತರಿಗೆ ಪರಿಹಾರ ಸರಿಯಾಗಿ ದೊರೆತಿಲ್ಲ. ಬಿತ್ತನೆ ಮಾಡಿ ನಾಶಗೊಂಡ ಎಲ್ಲ ಬೆಳೆಗಳಿಗೂ ಪರಿಹಾರ ದೊರೆಯುವಂತಾಗಬೇಕೆಂದು ಕೆಲ ರೈತರು ತಮ್ಮ ಅಳಲು ತೋಡಿಕೊಂಡರು.
ಕಾಟಾಚಾರದ ಅಧ್ಯಯನಃ
ಮುಂಗಾರು ಹಂಗಾಮಿನಲ್ಲಿ ಬಿತ್ತಿದ ಬೆಳೆಗಳು ನಾಶವಾದ ಕುರಿತು ಅಕ್ಟೋಬರಲ್ಲಿ ಕಟಾವು ಮಾಡಲಾಗುತ್ತದೆ. ಆ ಅವಧಿಯಲ್ಲಿಯೇ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲನೆ ಮಾಡಬೇಕಾದ ತಂಡ ಮತ್ತೆ ಹಿಂಗಾರು ಬಿತ್ತನೆ ಮಾಡಿ 1-2 ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಈಗ ಮುಂಗಾರು ಹಂಗಾಮಿನ ಬೆಳೆನಾಶವಾದ ಕುರಿತು ಪರಿಶೀಲನೆಗೆ ಆಗಮಿಸಿದ್ದು, ಎಷ್ಟರ ಮಟ್ಟಿಗೆ ಸೂಕ್ತ. ಇಂತಹ ಅಧ್ಯಯನದಿಂದ ರೈತರ ನಿಜವಾದ ಸಂಕಷ್ಟ ಅರಿಯಲು ಹೇಗೆ, ಕಾಟಾಚಾರದ ಅಧ್ಯಯನದಿಂದ ಏನು ಪ್ರಯೋಜನ ಎಂದು ರೈತರು ತಮ್ಮ ತಮ್ಮಲ್ಲಿಯೆ ಮಾತನಾಡಿಕೊಳ್ಳುವಂತಾಯಿತು.
ಜಿ.ಪಂ ಸದಸ್ಯರಾದ ರೇಣಪ್ಪ ಸೋಮಗೊಂಡ, ಜಹೂರ ಹಾಜಿ, ಕೃಷ್ಣಪ್ಪ ಲಮಾಣಿ, ರಮೇಶ ದೇಶಪಾಂಡೆ ಸೇರಿದಂತೆ ಇತರರಿದ್ದರು.
ರೈತ ಸಂಘದಿಂದ ಮನವಿಃ
ತಾಲೂಕು ಬರಪೀಡಿತವೆಂದು ಘೋಷಣೆಯಾಗಿದ್ದು, ಶೀಘ್ರ ಬರ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ತಾಲೂಕಿಗೆ ಆಗಮಿಸಿದ ಕೇಂದ್ರ ಬರ ಅಧ್ಯಯನ ತಂಡಕ್ಕೆ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಂಚಾಲಕ ಮಲ್ಲಿಕಾಜರ್ುನ ರಾಮದುರ್ಗ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಮಳೆಯಾಗದೆ ರೈತರು ಬಿತ್ತಿದ ಬೆಳೆಗಳು ನಾಶವಾಗಿ ಬೀಜೋಪಚಾರಕ್ಕೆ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುವಂತಾಗಿದೆ. ಕಳೆದ ಸಾಲಿನಲ್ಲಿ ರೈತರಿಗೆ ಹಂಚಿಕೆ ಪರಿಹಾರ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಆದರೆ ಈ ಬಾರಿ ಕೇಂದ್ರ ಹಾಗೂ ರಾಜ್ಯದಿಂದ ರೈತರಿಗೆ ಬಿಡುಗಡೆಯಾಗುತ್ತಿರುವ ಅನುದಾನ ಸಮರ್ಪಕವಾಗಿ ಹಂಚಿಕೆಯಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಅವರು ಮನವಿ ಮೂಲಕ ಒತ್ತಾಯಿಸಿದ್ದಾರೆ.