ಕಾರವಾರ 23: ಕೇಂದ್ರ ರೈಲು, ನೇಮಕಾತಿ ಬೋರ್ಡ ಇಲಾಖೆಯ ಸಿಬ್ಬಂದಿ ನೇಮಕಾತಿ ಪರೀಕ್ಷೆಗೆ ಮಂಗಳ ಸೂತ್ರ, ಬಳೆ, ಧಾರ್ಮಿಕ ಚಿಹ್ನೆಗಳನ್ನ ಸಂಪೂರ್ಣವಾಗಿ ನಿಷೇಧಿಸಿ ಅಭ್ಯರ್ಥಿಗಳಿಗೆ ಕಳಿಸಿದ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿರುವುದು ಕೇಂದ್ರ ಸರ್ಕಾರದ ಹಿಂದೂಗಳ ಕುರಿತು ದಂದ್ವ ನೀತಿಯು ಹಿಂದೂಗಳ ಭಾವನೆಗೆ ಧಕ್ಕೆ ತರುವಂತ ಕ್ರಮದ ವಿರುದ್ದ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ರವೀಂದ್ರ ನಾಯ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಇಂದು ಕೇಂದ್ರದ ರೈಲೆ ನೇಮಾಕಾತಿ ಬೋರ್ಡ ಅಭ್ಯರ್ಥಿಗಳಿಗೆ ಕಳಿಸಿರುವ ಪ್ರವೇಶ ಪತ್ರ ಪ್ರದರ್ಶಿಸಿ ಕೇಂದ್ರ ಸರ್ಕಾರದ ಹಿಂದೂ ಧರ್ಮದ ದ್ವಂದ್ವ ನೀತಿಯ ಕುರಿತು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಭ್ಯರ್ಥಗಳಿಗೆ ಎಫ್ರೀಲ್ 22 ರಂದು ಪರೀಕ್ಷೆ ಜರುಗಿಸಲಿದ್ದು, ಪರೀಕ್ಷೆ ಸಂಧರ್ಭದಲ್ಲಿ ಮಂಗಳ ಸೂತ್ರ, ಲೋಹದ ಆಭರಣ , ಬಳೆ, ಧಾರ್ಮಿಕ ಸಂಕೇತ ಆಭರಣ, ಬ್ರೀಸ್ ಲೈಟ್, ನೀರಿನ ಬಾಟಲ್, ತರದಂತೆ ಅಭ್ಯರ್ಥಿಗಳಿಗೆ ರವಾನಿಸಿದ ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.
ಹಿಂದು ಮಹಿಳೆಯರಿಗೆ ಅವಮಾನ : ಹಿಂದೂ ಧರ್ಮದ ಮಹಿಳೆಯರಿಗೆ ಮಂಗಳ ಸೂತ್ರ ಮತ್ತು ಬಳೆ ಧಾರ್ಮಿಕ ಗೌರವದ ಸಂಕೇತ. ದಾಂಪತ್ಯ ಜೀವನದ ಭಾಂದವ್ಯದ ದ್ಯೋತಕವಾಗಿರುವ ಮಂಗಳ ಸೂತ್ರ ಮತ್ತು ಬಳೆ ತೆಗೆಸುವ ಕಾರ್ಯ ಕೇಂದ್ರ ಸರ್ಕಾರವು ಹಿಂದೂ ಮಹಿಳೆಯರಿಗೆ ಮಾಡಿರುವ ಅವಮಾನ. ಅಲ್ಲದೇ, ಧಾರ್ಮಿಕ ಚಿಹ್ನೆ ಅಡಿಯಲ್ಲಿ ಕುಂಕುಮ, ವಿಭೂತಿ, ಜನಿವಾರ, ಕಾಶಿದಾರ ಸಹಿತ ನಿಷೇಧಿಸಿದೆ. ಇದು ಕೇಂದ್ರ ಸರ್ಕಾರದ ಹಿಂದೂ ವಿರೋಧ ನೀತಿಯಾಗಿದೆ ಎಂದು ಬಲವಾಗಿ ಟೀಕಿಸಿದ್ದಾರೆ.
ಬಿಜೆಪಿ ನೈತಿಕ ಹೊಣೆ: ಹಿಂದೂ ಧರ್ಮದ ನೀತಿಯನ್ನು ಪ್ರತಿಪಾದಿಸುವ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು, ಅಧರ್ಮ ನೀತಿಯನ್ನು ಅನುಸರಿಸಿ, ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿರುವ ಬಿಜೆಪಿ ಹೊಣೆಗಾರಿಕೆ ಹೊರಬೇಕಾಗುತ್ತದೆ . ಬಿಜೆಪಿಯು ಹಿಂದೂ ಧರ್ಮದ ಕುರಿತು ದ್ವಂದ್ವ ನೀತಿಯ ವಿರುದ್ಧ , ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಹಿಂದಕ್ಕೆ ಪಡೆಯದಿದ್ದರೆ, ಸಾರ್ವತ್ರಿಕ ಹೋರಾಟ ಎದುರಿಸಬೇಕಾದಿತು ಎಂದು ರವೀಂದ್ರ ನಾಯ್ಕ ಎಚ್ಚರಿಸಿದ್ದಾರೆ.