ಶತಕ ವಂಚಿತ ಕರುಣ್ ನಾಯರ್: ಉತ್ತಮ ಮೊತ್ತದತ್ತ ಭಾರತ ರೆಡ್

ಬೆಂಗಳೂರು, ಆ 24      ಅಂಕಿತ್ ಕಲ್ಸಿ (ಔಟಾಗದೆ 80 ರನ್) ಅವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ಭಾರತ ರೆಡ್ ತಂಡ ದುಲೀಪ್ ಟ್ರೋಫಿ ಎರಡನೇ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಉತ್ತಮ ಮೊತ್ತದತ್ತ ದಾಪುಗಾಲು ಇಟ್ಟಿದೆ. ಕೇವಲ ಒಂದು ರನ್ನಿಂದ ಕರುಣ್ ನಾಯರ್ ಶತಕ ವಂಚಿತರಾದರು.  ಬೆಂಗಳೂರಿನ ಹೊರವಲಯದ ಆಲೂರಿನಲ್ಲಿರುವ ಕೆಎಸ್ಸಿಎ ಅಂಗಳದಲ್ಲಿ ಮೂರು ವಿಕೆಟ್ ಕಳೆದುಕೊಂಡು 185 ರನ್ ಗಳಿಂದ ಪ್ರಥಮ ಇನಿಂಗ್ಸ್ ಮುಂದುವರಿಸಿದ ಭಾರತ ರೆಡ್ ತಂಡ ಭೋಜನ ವಿರಾಮದ ವೇಳೆಗೆ  ನಾಲ್ಕು ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತು. ಮೊದಲನೇ ದಿನ 189 ಎಸೆತಗಳನ್ನು ಅಜೇಯ 92 ರನ್ ಗಳಿಸಿ ಹಿರೋ ಆಗಿ ಮೆರೆದಿದ್ದ ಕನ್ನಡಿಗ ಕರುಣ್ ನಾಯರ್ ಇಂದು ಶತಕ ಪೂರೈಸಲಿದ್ದಾರೆ ಎಂದೇ ಎಲ್ಲರು ಭಾವಿಸಿದ್ದರು. ಆದರೆ, ಬ್ಯಾಟಿಂಗ್ ಆರಂಭಿಸಿದ ನಾಯರ್ ಒಂದು ರನ್ ನಿಂದ ಶತಕ ವಂತರಾಗಿ ಔಟ್ ಆದರು.   ಇವರಿಗೆ ಮೊದಲನೇ ದಿನದಲ್ಲಿ ಹೆಗಲು ನೀಡಿದ್ದ ಅಂಕಿತ್ ಕಲ್ಸಿ ಎರಡನೇ ದಿನವಾದ ಇಂದು ಕೂಡ ತನ್ನ ಆಕರ್ಷಕ ಬ್ಯಾಟಿಂಗ್ ಮುಂದುವರಿಸಿದರು. 282 ಎಸೆತಗಳನ್ನು ಆಡಿದ ಕಲ್ಸಿ 80 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಮತ್ತೊಂದು ತುದಿಯಲ್ಲಿ ಇವರಿಗೆ ಸಾಥ್ ನೀಡುತ್ತಿದ್ದ ಇಶಾನ್ ಕಿಶಾನ್ 50 ಎಸೆತಗಳಲ್ಲಿ 36 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಸಂಕ್ಷಿಪ್ತ ಸ್ಕೋರ್(ಭೋಜನ ವಿರಾಮ) ಭಾರತ ರೆಡ್ ಪ್ರಥಮ ಇನಿಂಗ್ಸ್: 101 ಓವರ್ಗಳಲ್ಲಿ 240/1 (ಅಂಕಿತ್ ಕಲ್ಸಿ ಔಟಾಗದೆ 80*, ಇಶಾನ್ ಕಿಶಾನ್ ಔಟಾಗದೆ 36; ಸೌರಭ್ ಕುಮಾರ್ 59 ಕ್ಕೆ 1,ಅಂಕಿತ್ ಚೌಧರಿ 56 ಕ್ಕೆ