ಗೆಲುವಿನ ಸಂಭ್ರಮ, ಬಿಜೆಪಿಯಿಂದ 5 ಸಾವಿರ ಲಾಡು ವಿತರಣೆ

ಮುಂಬೈಅ, 24:    ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಅಧಿಕೃತ ಘೋಷಣೆಗೆ ಮೊದಲೇ ಸಂಭ್ರಮದಲ್ಲಿ ಇರುವ  ಬಿಜೆಪಿ ಗೆಲುವಿನ ಆಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಮುಂಬೈನ ವಿವಿಧ ಭಾಗಗಳಲ್ಲಿ ಫಲಿತಾಂಶದ ನಂತರ ವಿತರಣೆ ಮಾಡಲು 5 ಸಾವಿರ  ಲಾಡು ಸಿದ್ಧಪಡಿಸಿಕೊಂಡಿದೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಶಿವಸೇನೆ ಮೈತ್ರಿಕೂಟ ಗೆಲುವು ಸಾಧಿಸಲಿದ್ದು  ಜೊತೆಗೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದವು. ಮುಂಬೈನ ಪ್ರಮುಖ ಬಡಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರ ಬೃಹತ್ ಕಟೌಟ್ , ಪೋಸ್ಟರ್ ಗಳು ಎಲ್ಲ ಕಡೆ   ರಾರಾಜಿಸುತ್ತಿದೆ. ಬೃಹತ್ ಟಿವಿಗಳನ್ನೂ ಅಳವಡಿಸಲಾಗಿದ್ದು ,ಫಲಿತಾಂಶದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಲ್ಪಿಸಲಾಗಿದೆ.