ಟಿಪ್ಪು ಸುಲ್ತಾನ ಜಯಂತ್ಯೋತ್ಸವ ಆಚರಣೆ

ಲೋಕದರ್ಶನ ವರದಿ

ವಿಜಯಪುರ, 10:  ನಗರದ ಟಿಪ್ಪು ಸುಲ್ತಾನ ವೃತ್ತದಲ್ಲಿ ಟಿಪ್ಪು ಸುಲ್ತಾನ ಸಂಘರ್ಷ ಸಮಿತಿ ವತಿಯಿಂದ ರವಿವಾರ ಹಜರತ್ ಟಿಪ್ಪು ಸುಲ್ತಾನ ಅವರ 269ನೇ ಜಯಂತೋತ್ಸವ ಆಚರಿಸಲಾಯಿತು. 

ಈ ಸಂರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರಿಫ ಮಾತನಾಡಿ, ವಿಶ್ವಕ್ಕೆ ಕ್ಷಿಪಣಿಯನ್ನು ನೀಡಿದ ಕೀತರ್ಿ ಟಿಪ್ಪು ಸುಲ್ತಾನರಿಗೆ ಸಲ್ಲುತ್ತದೆ. ಇಂಗ್ಲೆಡ ಹಾಗೂ ನಾಸಾದಲ್ಲಿ ಟಿಪ್ಪು ಸುಲ್ತಾನರು ರಚನೆ ಮಾಡಿರುವ ಕ್ಷಿಪಣಿಯ ಫಾಮರ್ುಲಾವನ್ನು ಅಭಿವೃದ್ಧಿ ಪಡಿಸಿ ಈಗಿನ ಕ್ಷಿಪಣಿಯಾಗಿರುವುದು ಇತಿಹಾಸ ಇದೆ. ಸರ್ವ ಸಮಾಜವನ್ನು ಜೊತೆಗೂಡಿಸಿಕೊಂಡು ತಮ್ಮ ರಾಜ್ಯದಲ್ಲಿ ಭಾವೈಕ್ಯತೆಯ ನಿದರ್ಶನ ತೊರಿಸಿದಂತಹವರು ಟಿಪ್ಪು ಸುಲ್ತಾನ. ಅವರು ತೊರಿಸಿದಂತಹ ಮಾರ್ಗದಲ್ಲಿ ನಾವುಗಳು ನಡೆದು ಸಮಾಜಕ್ಕೆ ಮಾದರಿಯಾಗಬೇಕಾಗಿದೆ ಎಂದರು. 

ಪ್ರತಿ ವರ್ಷದಂತೆ ಈ ವರ್ಷವು ಕೂಡ ಎಲ್ಲ ಸಮುದಾಯದ ಜನರನ್ನೂ ಜೊತೆಗೂಡಿಸಿಕೊಂಡು ಅರ್ಥಪೂರ್ಣವಾಗಿ ಈ ಜಯಂತಿ ಆಚರಿಸಿದ ಟಿಪ್ಪು ಸುಲ್ತಾನ ಸಂಗರ್ಷ ಸಮಿತಿಯ ಕಾರ್ಯ ಶ್ಲ್ಯಾಘನೀಯ. ಮುಂದಿನ ದಿನಗಳಲ್ಲಿ ಸಕರ್ಾರದಿಂದ ಪರವಾನಿಗೆ ಪಡೆದು ಅತಿವಿಜೃಂಭಣೆಯಿಂದ ಟಿಪ್ಪಿ ಜಯಂತಿ ಆಚರಿಸೋಣ ಎಂದು ಅವರು ಹೇಳಿದರು.

ದಲಿತ ಮುಖಂಡ ಶ್ರೀನಾಥ ಪೂಜಾರಿ ಮಾತನಾಡಿ, ಬಡವರ, ಶೋಷಿತರ ನಿರ್ಗತಿಕರ ಮತ್ತು ಶೋಷಣೆಗೊಳಪಟ್ಟ ಎಲ್ಲ ಸಮುದಾಯಗಳಿಗೆ ಮಾನ್ಯತೆ ನೀಡಿ ಎಲ್ಲರನ್ನು ಪ್ರೀತಿಸುವಂತಹ ಒಬ್ಬ ಒಳ್ಳೆಯ ತಾಯಿ ವೃದಯದ ರಾಜ ಟಿಪ್ಪು ಸುಲ್ತಾನರಾಗಿದ್ದರು. ಅವರ ಜಯಂತೋತ್ಸವ ಆಚರಿಸಲು ನಮಗೆ ಹೆಮ್ಮೆ ಅನಿಸುತ್ತದೆ. ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಟಿಪ್ಪು ಸುಲ್ತಾನರು ಮನುವಾದ ವ್ಯವಸ್ಥೆ ವಿರುದ್ಧ ಖಡ್ಗದಿಂದ ಉತ್ತರ ಕೊಡುವ ಮೂಲಕ ರಾಜ ಧರ್ಮ ಪಾಲಿಸಿದ್ದರು. 

ಆದರೆ ಅಂಥ ಟಿಪ್ಪು ಸುಲ್ತಾನರ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದನ್ನು ಖಂಡಿಸುತ್ತೇನೆ. ಟಿಪ್ಪು ಸುಲ್ತಾನರ ಜನಪರ ಕಾರ್ಯಗಳು ಇಡಿ ನಾಡಿಗೆ ಅಷ್ಟಯಲ್ಲ ಇಡಿ ವಿಶ್ವಕ್ಕೆ ಗೊತ್ತಿದೆ. ಮುಸ್ಲಿಂ ರಾಜ ಎಂಬ ಕಾರಣಕ್ಕೆ ಟಿಪ್ಪು ಸುಲ್ತಾನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಕಾರ್ಯಕ್ರಮ ಸಂಯೋಜಕ ಇರಫಾನ ಶೇಖ ಮತನಾಡಿ, ಟಿಪ್ಪು ಸುಲ್ತಾನರ ಜಯಂತಿ ಸಕರ್ಾರದಿಂದ ಆಚರಿಸುತ್ತಿರಲಿಲ್ಲ ಆಗ ಕೂಡ ನಾವು ಅವರ ಜಯಂತಿಯನ್ನು ನಿರಂತರವಾಗಿ ವಿಜಯಪುರದಲ್ಲಿ ಆಚರಣೆ ಮಾಡಿದ್ದೇವೆ. ನಂತರ ಸಕರ್ಾರದಿಂದ ಆಚರಿಸಲು ಪ್ರಾರಂಭವಾದಾಗ ಆಗಲೂ ಕೂಡ ನಾವು ಸಕರ್ಾರದ ಜೊತೆ ಸೇರಿ ಆಚರಣೆ ಮಾಡಿದ್ದೇವೆ. ಈಗ ಮತ್ತೆ ಸಕರ್ಾರ ಆಚರಿಸುವುದನ್ನು ತಡೆ ಹಿಡಿದೆದೆ ಈಗಲೂ ಕೂಡ ನಾವು ಆಚರಣೆ ಮಾಡುತ್ತಿದ್ದೆವೆ. 

ಟಿಪ್ಪು ಸುಲ್ತಾನರ ಇತಿಹಾಸವನ್ನು ಪುಸ್ತಕಗಳಿಂದ ತೆಗೆಯುತ್ತೇವೆಂದು ಕೆಲ ನಾಯಕರು ಹೇಳುತ್ತಿರುವುದು ಖಂಡನೀಯ ಎಂದರು. 

ಈ ಸಂದರ್ಭದಲ್ಲಿ ರವೀಂದ್ರ ಜಾಧವ, ಅಕ್ರಮ ಮಾಶ್ಯಾಳಕರ, ಜಾಫರ ಕಲಾದಗಿ, ಅಲ್ತಾಫ ಲಕ್ಕುಂಡಿ, ಸಾದಿಕ ಅಫಘಾನ, ಅಶ್ಪಾಕ ಮನಗೂಳಿ, ಇಸಾಕ ಲಕ್ಕುಂಡಿ, ರಾಕೇಶ, ಅಕ್ಷಯ, ಸಾದಿಕ ಇಮಾರತವಾಲೆ, ಹನ್ನಾನ ಶೇಖ, ಟಿಪ್ಪು ಸುಲ್ತಾನ ಇಮಾರತವಾಲೆ, ಮೀರಾಸಾಬ ಮುಲ್ಲಾ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.