ದೇಶಬಂಧು ಚಿತ್ತರಂಜನ್ ದಾಸ್ ಜಯಂತಿ ಆಚರಣೆ

ಕೋಲ್ಕತಾ, ನ 05:   ದೇಶ ಬಂಧು ಚಿತ್ತರಂಜನ್ ದಾಸ್ ಅವರ 149ನೇ ಜಯಂತಿ ಅಂಗವಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಅವರು ಗೌರವ ನಮನ ಸಲ್ಲಿಸಿದ್ದಾರೆ ದೇಶಬಂಧು ಚಿತ್ತರಂಜನ್ ದಾಸ್ ಭಾರತದ ಶ್ರೇಷ್ಠ ಪುತ್ರರಲ್ಲಿ ಒಬ್ಬರು, ಭಾರತದ ಸ್ವಾತಂತ್ರ್ಯ ಚಳವಳಿಯ ರಾಜಿಯಾಗದ ನಾಯಕ, ಅವರು ಬಂಗಾಳದ ಪ್ರಮುಖ ರಾಜಕಾರಣಿ,  ವಕೀಲರು ಹಾಗೂ ಭಾರತೀಯ ರಾಷ್ಟ್ರೀಯ ಚಳವಳಿಯ ಕಾರ್ಯಕರ್ತರು. ಅವರು ದೇಶಕ್ಕೆ ಸೇವೆ ಸಲ್ಲಿಸಲು ತಮ್ಮ ಲಾಭದಾಯಕ ವಕೀಲಿಕೆಯನ್ನು ತ್ಯಜಿಸಿದ್ದು ಮಾತ್ರವಲ್ಲ, ತಮ್ಮ ಆಸ್ತಿ ಸೇರಿದಂತೆ ದೇಶದ ಜನರಿಗೆ ಎಲ್ಲವನ್ನೂ ಬಿಟ್ಟುಕೊಟ್ಟರು.  ಗುರುದೇವ ರವೀಂದ್ರನಾಥ ಟ್ಯಾಗೋರ್ ಬರೆದಂತೆ ಅವರದ್ದು ಅಮರ ಜೀವನ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಶ್ರದ್ಧಾಭಕ್ತ ಶಿಷ್ಯರಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ, ದೇಶಬಂಧು ತಮ್ಮ ಪತ್ನಿ ಬಸಂತಿ ದೇವಿಯನ್ನು  ಮಾತೃ ಭಾವದಿಂದ ನೋಡುತ್ತಿದ್ದರು. ಅವರು 1924 ರಲ್ಲಿ ಕೋಲ್ಕತಾ ನಿಗಮದ ಮೊದಲ ಮೇಯರ್ ಆಗಿ ಆಯ್ಕೆಯಾದರು. ಜನವರಿ 1923 ರಲ್ಲಿ  ಸ್ವರಾಜ್ (ಸ್ವಾತಂತ್ರ್ಯ) ಪಕ್ಷವನ್ನು ಸ್ಥಾಪಿಸಿ ಬ್ರಿಟಿಷರಿಂದ ದೇಶವನ್ನು ಸ್ವತಂತ್ರಗೊಳಿಸಲು ಕಟಿಬದ್ಧರಾದರು.  ಅವರ ಅಪಾರ ಜನಪ್ರಿಯತೆಯು ಸರ್ಕಾರದ ಅನ್ಯಾಯದ ಕೃತ್ಯಗಳನ್ನು ವಿರೋಧಿಸಬಲ್ಲ ಕೇಂದ್ರ ಶಾಸಕಾಂಗ ಮತ್ತು ಪ್ರಾಂತೀಯ ಶಾಸಕಾಂಗ ಮಂಡಳಿಗೆ ಹೆಚ್ಚಿನ ಸಂಖ್ಯೆಯ ಸ್ವರಾಜ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವಾಯಿತು. ಶ್ರೇಷ್ಠ ದೇಶಭಕ್ತ ಎನಿಸಿಕೊಂಡಿದ್ದ ಚಿತ್ತರಂಜನ್ ದಾಸ್, ಕವಿ ಹಾಗೂ ಲೇಖಕರೂ ಆಗಿದ್ದರು.