ಬೆಳಗಾವಿ 17: ಸ್ಥಳಿಯ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿ ಸೋಮವಾರ ದಿ. 17 ರಂದು ಗೋಮಟೇಶ ವಿದ್ಯಾಪೀಠದ ಸಂಸ್ಥಾಪಕ ಅಧಿಷ್ಠಾತಾ, ಜ್ಞಾನಯೋಗಿ ಶಿಕ್ಷಣಮಹರ್ಷಿ ಜಿನೈಕ್ಯ 105 ಶ್ರೀ ಭಧ್ರಬಾಹು ಮಹಾರಾಜರ 28 ನೇ ಪುಣ್ಯ ತಿಥಿಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಗೋಮಟೇಶ ವಿದ್ಯಾಪೀಠದ ಅಧಿಷ್ಠಾತಾ ಹಾಗೂ ಬೆಳಗಾವಿ ಗ್ರಾಮೀಣ ವಿಧಾನ ಸಭಾ ಮತ ಕ್ಷೇತ್ರದ ಮಾಜಿ ಶಾಸಕರು ಆದ ಸಂಜಯ ಬಿ ಪಾಟೀಲ ಅವರು ಸ್ವಾಮಿಜೀಯವರ ಮೂರ್ತಿಗೆ ಮಾಲಾರೆ್ಣ ಮಾಡಿ ಗೌರವವನ್ನು ಅರ್ಿಸಿದರು.
ಕಾರ್ಯಕ್ರಮದಲ್ಲಿ ಗೋಮಟೇಶ ವಿದ್ಯಾಪೀಠದ ನಿರ್ದೇಶಕರುಗಳಾದ ಸನತ್ ಕುಮಾರ ವ್ಹಿ. ವಿ. ಹಾಗೂ ರಾಜೇಶ ಪಾಟೀಲ, ವೃಷಭ ಸಂಜಯ ಪಾಟೀಲ, ಮೋಕ್ಷ ಸನತ್ ಕುಮಾರ, ಅಕ್ಷಯ ಕಬ್ಬೂರೆ ಹಾಗೂ ಇತರೆ ಆಡಳಿತ ಮಂಡಳಿಯ ಹಿತೈಸಿಗಳು ಉಪಸ್ಥಿತರಿದ್ದರು. ವಿದ್ಯಾಪೀಠ ಸಂಸ್ಥೆಯ ವಿವಿಧ ಶಾಖೆಗಳ ಪ್ರಾಂಶುಪಾಲರುಗಳಾದ ಡಿ.ಎಸ್.ಹನಗಂಡಿ, ಮಹೇಶ ಕಾರೇಕರ, ಸುನೀಲ ಪಾಟೀಲ, ಸಾವಿತ್ರಿ ಬಿ ಪಾಟೀಲ ಜ್ಯೋತ್ಸನಾ ಹನಮಗೊಂಡ, ಸರೋಜಾ ಎಂ ಪಾಟೀಲ ಹಾಗೂ ಬೈರು ಪಾಟೀಲ, ಹಾಗೂ ಇತರರು ಪಾಲ್ಗೊಂಡು ಜಿನೈಕ್ಯ ಸ್ವಾಮಿಜಿಯವರ ಮೂರ್ತಿಗೆ ಮಾಲಾರೆ್ಣ ಮಾಡಿ ಗೌರವ ಸಲ್ಲಿಸಿದರು. ವಿದ್ಯಾಪೀಠದ ಎಲ್ಲ ಶಾಖೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಜೀಯವರ ಭಾವಚಿತ್ರಕ್ಕೆ ಪುಷ್ಪ ಅರ್ಿಸಿ ವಂದಿಸಿದರು.