ದೇಶಿ ಉಡುಗೆ ತೊಟ್ಟು ಸಂಭ್ರಮದ ಸಂಕ್ರಾಂತಿ ಆಚರಣೆ

ಲೋಕದರ್ಶನ ವರದಿ

ಕಾಗವಾಡ 18:  ಶಿವಾನಂದ ಮಹಾವಿದ್ಯಾಲಯದ ಇತಿಹಾಸ ವಿಭಾಗ ಮತ್ತು ಪರಂಪರೆಕೂಟ ಇವುಗಳ ಆಶ್ರಯದಲ್ಲಿ ದಿ.16ರಂದು ಮಕರ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ದೇಶಿ ಅಡುಗೆ ಹಾಗೂ ಸಂಪ್ರದಾಯ ಬದ್ಧ ಉಡುಗೆಗಳನ್ನು ದರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಪ-ಪ್ರಾಚಾರ್ಯ ಪ್ರೊ.ಎಸ್.ಎಸ್.ಬಾಗನೆ ಮಾತನಾಡುತ್ತಾ, ವಿದ್ಯಾಥರ್ಿಗಳು ನಮ್ಮದೇಶದ ಸಂಸ್ಕೃತಿಯ ಪ್ರತೀಕವಾದ ಇಂತಹ ಹಬ್ಬಗಳನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಉಳಿಸಿಕೊಂಡು ಹೋಗಬೇಕೆಂದು ಹೇಳಿದರು.

ಡಾ.ಎಸ್.ಪಿ.ತಳವಾರ ಇವರು, ಸಂಕ್ರಮಣ ರೈತರು ವರ್ಷದುದ್ದಕ್ಕೂ ಬೆಳೆದ ಬೆಳೆಗಳನ್ನು ಮನೆಗೆ ಒಯ್ದು ಕುಟುಂಬದ ಸದಸ್ಯರೆಲ್ಲ ಸೇರಿ ಸಮೃದ್ಧಿಯ ಪ್ರತೀಕವಾದ ಸಂಕ್ರಾಂತಿ ಹಬ್ಬವನ್ನು ಎಳ್ಳುಬೆಲ್ಲವನ್ನು ಕೊಟ್ಟು ತೆಗೆದುಕೊಳ್ಳುವ ಮೂಲಕ ಆಚರಿಸಬೇಕೆಂದು ಕರೆ ನೀಡಿದರು.

ಪ್ರೊ. ಬಿ.ಎ.ಪಾಟೀಲ, ಡಾ.ಆರ್.ಎಸ್.ಕಲ್ಲೋಳಿಕರ ಮಕರ ಸಂಕ್ರಾಂತಿಯ ಹಬ್ಬದ ಮಹತ್ವವನ್ನು ತಿಳಿಸಿದರು. ಅಧ್ಯಕ್ಷತೆ ಪ್ರಾಚಾರ್ಯ ಡಾ.ಎಸ್.ಓ.ಹಲಸಗಿ ವಹಿಸಿ, ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಸೂರ್ಯ ತನ್ನ ಪಥ ಬದಲಿಸುವ ಸಂದರ್ಭವೇ ಸಂಕ್ರಾಂತಿ. ಇದು ನಮ್ಮ ದೇಹವನ್ನು ಅತೀ ಶೀತ ವಾತಾವರಣದಿಂದ ರಕ್ಷಿಸಿಕೊಳ್ಳಲು ಉಷ್ಣದ ಪ್ರತೀಕವಾದ ಎಳ್ಳು ಮತ್ತು ಬೆಲ್ಲವನ್ನು ಸೇವಿಸುವದರಿಂದ ದೇಹದರಕ್ಷಣೆ ಮಾಡಿಕೊಳ್ಳುವುದೇ ಈ ಹಬ್ಬದ ಮಹತ್ವವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೊ. ಜೆ.ಕೆ.ಪಾಟೀಲ, ಪ್ರೊ. ಆರ್.ಎಸ್.ನಾಗರಡ್ಡಿ, ಪ್ರೊ. ಆರ್.ಎ.ಬಡಿಗೇರ, ಪ್ರೊ. ಆಯ್.ಎಸ್.ಜಮಾದಾರ, ಡಾ.ಎಸ್.ಎ.ಕಕರ್ಿ, ಸಿಬ್ಬಂದಿವರ್ಗ ಹಾಗೂ ಬಿ.ಎ ವಿಭಾಗದಎಲ್ಲ ವಿದ್ಯಾಥರ್ಿಗಳು ಹಾಜರಿದ್ದರು.ಪ್ರತೀಕ್ಷಾ ಶಿಂಗೆ, ಪದ್ಮಶ್ರೀ ಪಾಟೀಲ ನಿರೂಪಿಸಿದರು.ಸುದೀರ ಬೇಡರ, ರಾಹುಲ ಕಾಂಬಳೆ ವಂದಿಸಿದರು.