ತಾಳಿಕೋಟಿ 15: ಪಟ್ಟಣದಲ್ಲಿ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿಯನ್ನು ತಾಲೂಕ ಆಡಳಿತ ಹಾಗೂ ಭೋವಿ ಸಮಾಜದ ಸಹಯೋಗದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಂಗಳವಾರ ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ಶ್ರೀ ಗುರು ಸಿದ್ದರಾಮೇಶ್ವರ ವೃತದಲ್ಲಿ ತಾಲೂಕ ಆಡಳಿತ ಹಾಗೂ ಭೋವಿ ಸಮಾಜದ ವತಿಯಿಂದ ಶ್ರೀ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಮ ನಮನ ಸಲ್ಲಿಸಲಾಯಿತು.ನಂತರ ತಾಲೂಕಾಡಳಿತದ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಗುರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ ಆನಂದ ಕಟ್ಟಿಮನಿ ಅವರು ಶ್ರೀ ಗುರು ಸಿದ್ದರಾಮೇಶ್ವರರು ಮಹಾನ್ ಸಂತರಾಗಿದ್ದು ವೀರಶೈವ ನಂಬಿಕೆಯ ಐದು ಜನ ಆಚಾರ್ಯರಲ್ಲಿ ಒಬ್ಬರಾಗಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣನವರ ಲಿಂಗಾಯತ ಕ್ರಾಂತಿಯ ಭಾಗವಾಗಿದ್ದ ಅವರು, ಸುಮಾರು 68,000 ವಚನಗಳು ಬರೆದಿದ್ದಾರೆ ಆದರೆ ಅದರಲ್ಲಿ ಕೇವಲ 1,379 ವಚನಗಳು ಲಭ್ಯ ಇವೆ. ಜಾತಿ ವ್ಯವಸ್ಥೆ ಲಿಂಗ ತಾರ ತಮ್ಯ ಹಾಗೂ ಅನಿಷ್ಟ ಸಂಪ್ರದಾಯಗಳ ವಿರುದ್ಧ ಅವರು ಮಾತನಾಡಿದರು, ವಚನ ಸಾಹಿತ್ಯವನ್ನು ವಿನಾಶದಿಂದ ರಕ್ಷಿಸುವಲ್ಲಿ ಅವರ ಪಾತ್ರ ಅನನ್ಯವಾಗಿದೆ, ಇಂಥಹ ಮಹಾನ್ ಸಂತನನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಬೇಡ ಅವರ ಬದುಕಿನ ಆದರ್ಶಗಳು ಇಡೀ ಸಮಾಜಕ್ಕೆ ಮಾದರಿಯೋಗ್ಯವಾಗಿವೆ ಎಂದರು.
ಈ ಸಮಯದಲ್ಲಿ ಸಮಾಜದ ಅಧ್ಯಕ್ಷರಾದ ನಿವೃತ್ತ ಶಿಕ್ಷಕ ಎಚ್.ಎನ್.ಕಟ್ಟಿಮನಿ, ದಲಿತ ಮುಖಂಡ ಮುತ್ತಪ್ಪ ಚಮಲಾಪೂರ, ಶ್ರೀನಿವಾಸ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಸಿರಸ್ತೆದಾರ ಜೆ.ಆರ್.ಜೈನಾಪೂರ,ಸಿ ಆರ್ ಸಿ. ರಾಜು ವಿಜಾಪುರ,ತಾಪಂ ನ ಮಹಾಂತಗೌಡ ದೊರಗೋಳ, ಪತ್ರಕರ್ತ ದೇವು ಕೂಚಬಾಳ, ಸಮಾಜದ ಸದಸ್ಯರಾದ ಭೀಮಣ್ಣ ಚೋಕಾವಿ ಸಿದ್ದಣ್ಣ ಚಬನೂರ, ಗಿರಿಯಪ್ಪ ಕಾರ್ಕೂರ್, ಬಸಪ್ಪ ಢವಳಗಿ, ಬಸಪ್ಪ ಕಟ್ಟಿಮನಿ, ಮುತ್ತಣ್ಣ, ತಮ್ಮಣ್ಣ ಹಗರಟಗಿ, ಸಾಬಣ್ಣ ಕಟ್ಟಿಮನಿ, ಭೋವಿ ಸಮಾಜ ಗಣ್ಯರು, ತಹಸಿಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಇದ್ದರು.