ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ಎಲ್ಲೆಡೆ ಗೋಪಿಲೋಲನ ಸ್ತುತಿ

ಬೆಂಗಳೂರು, ಆ 23 :   ಉದ್ಯಾನ ನಗರಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ರಾಜ್ಯದೆಲ್ಲಡೆ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಗಿದೆ 

 ದ್ವಾಪರಯುಗದಲ್ಲಿ ಸಾಮಾನ್ಯ ಮಾನವರಂತೆಯೇ ಬದುಕುತ್ತ, ಅಧರ್ಮ ನಾಶಕ್ಕಾಗಿ ಟೊಂಕ ಕಟ್ಟಿದ ಕೃಷ್ಣ ಜಗದ್ಗುರು ಎನಿಸಿಕೊಂಡಿದ್ದಾನೆ  ಶತ್ರುಗಳನ್ನು ಮಣಿಸಲು ಅದ್ಭುತ ತಂತ್ರಗಳನ್ನು ಹೆಣೆಯುವ ಮೂಲಕ ಅತ್ಯುತ್ತಮ ರಾಜಕಾರಣಿಯಾಗಿ ಸಂಭವಾಮಿ ಯುಗೇಯುಗೇ ಎಂದು ಸಾರುತ್ತ ಅಲೌಕಿಕತೆಯನ್ನೂ ಮರೆದಿದ್ದಾನೆ  

ಹದಿನಾರು ಸಾವಿರ ನಾರಿಯರ ಸೆರೆಯನ್ನು ಬಿಡಿಸಿ ಅವರೆಲ್ಲರಿಗೂ ಆಶ್ರಯವಿತ್ತು, ಸಮಾಜದಲ್ಲಿ ತಲೆಯೆತ್ತಿ ಬಾಳುವ ಅವಕಾಶ ಕಲ್ಪಿಸುವ ಮೂಲಕ ಇಂದಿಗೂ ಹೆಂಗೆಳೆಯರಿಗೆ ಪ್ರಿಯವಾಗಿದ್ದಾನೆ ಶ್ರೀಕೃಷ್ಣ 

ಪ್ರೇಮಿ, ವಿರಹಿ, ಗೃಹಸ್ಥ, ರಾಜಕಾರಣಿ, ದೈವಿಕತೆ, ಸಹೋದರತೆ, ಸ್ನೇಹ, ಭ್ರಾತೃತ್ವ ಸೇರಿದಂತೆ ಹಲವು ಗುಣಗಳ ಗಣಿಯಾದ ಶ್ರೀಕೃಷ್ಣ ತನ್ನ ನಡತೆಯ ಮೂಲಕ ಎಲ್ಲರಿಗೂ ಹತ್ತಿರವಾಗುತ್ತಾನೆ 

ಕೌರವರ ಕುಟಿಲತೆಯಿಂದ ಸಂಕಷ್ಟಕ್ಕೆ ಸಿಲುಕುವ ಪಾಂಡವರು ಹಾಗೂ ಅವರ ಪತ್ನಿ ದ್ರೌಪದಿಯನ್ನು ಹೆಜ್ಜೆ ಹೆಜ್ಜೆಗೂ ಸಲಹುತ್ತ ನ್ಯಾಯದ ಬೆನ್ನಿಗೆ ನಿಲ್ಲುವ ಸೂಚನೆ ನೀಡಿದ್ದಾನೆ 

ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸಲಾಗುತ್ತದೆ  ಶುಕ್ರವಾರ ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಶ್ರೀಕೃಷ್ಣ, ಬಲರಾಮ ಹಾಗೂ ಸುಭದ್ರೆಯರ ವಿಗ್ರಹ ಹಾಗೂ ರಾಧಾ ಕೃಷ್ಣರ ಪ್ರತಿಮೆಗಳನ್ನು ತುಳಸಿ ಮತ್ತು ನಾನಾ ಬಗೆಯ ಹೂವುಗಳಿಂದ ಅಲಂಕರಿಸಿ ಪೂಜಿಸಲಾಗಿದೆ  

ಬೆಳ್ಳಂಬೆಳಗ್ಗೆ ಪಂಚಾಮೃತ, ಪಂಚಗವ್ಯ ಸೇರಿದಂತೆ 9 ಬಗೆಯ ಅಭಿಷೇಕಗಳನ್ನು ನೆರವೇರಿಸಲಾಗಿದೆ   108 ನದಿಗಳ ಜಲಾಭಿಷೇಕ, 12 ಬಗೆಯ ಆರತಿಗಳನ್ನು ಭಕ್ತಾದಿಗಳು ಕಣ್ತುಂಬಿಕೊಂಡಿದ್ದಾರೆ  

 ಎಲ್ಲಾ ಆಚರಣೆಗಳನ್ನು ಧರ್ಮಗ್ರಂಥದ ಆಧಾರದಲ್ಲಿಯೇ ನೆರವೇರಿಸಲಾಗಿದೆ ಜೀವನದ ರಹಸ್ಯಗಳನ್ನು ಒಳಗೊಂಡಿರುವ ಭಗವದ್ಗೀತೆಯತನ್ನು ಉಪದೇಶಿಸಿದ ಮಹಾಪುರುಷನ ಜನ್ಮದಿನದಂದು, 52 ಜಾಗತಿಕ ಭಾಷೆಗಳಲ್ಲಿ ಭಗವದ್ಗೀತೆಯನ್ನು ಪ್ರದರ್ಶನವನ್ನು ಸ್ಥಾಪಿಸಲಾಗಿದೆ. ಎಲ್ಲವನ್ನೂ ಶ್ರೀಲ ಪ್ರಭುಪಾದರ ಮೂಲ ಕೃತಿಯಿಂದ ಅನುವಾದಿಸಲಾಗಿದೆ ಎಂದು ಇಸ್ಕಾನ್ ಮುಖ್ಯಸ್ಥ ನವೀನ ನೀರದ ದಾಸ ತಿಳಿಸಿದ್ದಾರೆ  

 ವಿಶಿಷ್ಟ ರೀತಿಯಲ್ಲಿ ಅಲಂಕಾರಗೊಂಡಿರುವ ಶ್ರೀಕೃಷ್ಣನ ದರ್ಶನಕ್ಕಾಗಿ ಸಾವಿರಾರು ಭಕ್ತರು ಇಸ್ಕಾನ್ ಗೆ ಭೇಟಿ ನೀಡುವ ಕಾರಣ, ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ತರಬೇತಿ ಪಡೆದಿರುವ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು   ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗಾಗಿ ವಿಶೇಷ ವ್ಯವಸ್ಥೆ , ಶುಚಿ ರುಚಿಯಾದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು 

  ಪುಟ್ಟ ಮಕ್ಕಳಿಗೆ ಅಲಂಕಾರ   

ಶ್ರೀಕೃಷ್ಣ ಜನ್ಮದ ಪ್ರಯುಕ್ತ ಎಲ್ಲರ ಮನೆಗಳಲ್ಲಿ ಪುಟ್ಟ ಮಕ್ಕಳಿಗೆ ರಾಧಾ ಹಾಗೂ ಕೃಷ್ಣರ ಅಲಂಕಾರ ಹಾಕಿ ಹೆಂಗೆಳೆಯರು ಸಂಭ್ರಮಿಸಿದರು  ಅನೇಕ ಸಂಘ ಸಂಸ್ಥೆಗಳು ಕೃಷ್ಣ ವೇಷ ಸ್ಪಧರ್ೆ ಆಯೋಜಿಸಿದ್ದವು 

ಮನೆ ಮನೆಗಳಲ್ಲಿ ಶ್ರೀಕೃಷ್ಣನಿಗೆ ಪ್ರಿಯವಾದ ಲಡ್ಡು, ಕೋಡುಬಳೆ, ಚಕ್ಕುಲಿ, ಬೆಣ್ಣೆಯಿಂದ ಮಾಡಿದ ಪದಾರ್ಥಗಳನ್ನು ನೈವೇದ್ಯಕ್ಕೆ ಅಪರ್ಿಸಲಾಗಿದ್ದು,  ದಕ್ಷಿಣ ಕನ್ನಡದ ಹಲವೆಡೆ ಮೊಸರು ಕುಡಿಕೆ ಸ್ಪಧರ್ೆ ಆಯೋಜಿಸಲಾಗಿತ್ತು.