ಲೋಕದರ್ಶನ ವರದಿ
ಯಲಬುರ್ಗಾ 05: ಪಟ್ಟಣದ ಮುಧೋಳ ರಸ್ತೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಡಾ.ಬಾಬು ಜಗಜೀವನರಾಮ್ ಜಯಂತಿಯನ್ನು ಭಾನುವಾರ ಆಚರಿಸಲಾಯಿತು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಮ್ಮ ಆರ್.ಕಾರನೂರು, ಅಂಗನವಾಡಿ ಮೇಲ್ವಿಚಾರಕರಾದ ಲಲಿತಾ ನಾಯಕ್,ಮಾಧವಿ ವೈದ್ಯ ಸೇರಿ ಇನ್ನಿತರರು ಇದ್ದರು.
ಪ.ಪಂ.ಕಾರ್ಯಾಲಯ ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ ನಿಡಶೇಸಿ, ಸಿಬ್ಬಂದಿಗಳಾದ ವೆಂಕಟೇಶ ಜ್ಯೋಶಿ,ಶಿವಕುಮಾರ ಸರಗಣಾಚಾರಿ, ಮಂಜುನಾಥ, ಮರಬಾಪ್ಪ ಹಾಗೂ ಇನ್ನಿತರರು ಇದ್ದರು.