ತಾಪಂ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಶಾಲಿಯಾದ ಅಭ್ಯಥರ್ಿಗಳಿಂದ ಸಂಭ್ರಮಾಚರಣೆ

ಲೋಕದರ್ಶನ ವರದಿ

ಸಿಂದಗಿ 04:ತಾಲೂಕಿನ ಮಲಘಾಣ ತಾಪಂ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯಥರ್ಿ ಈರಮ್ಮ ಶಾಂತಪ್ಪ ಬಿರಾದಾರ ಅವರು ಜಯಶಾಲಿಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಸಯ್ಯ ಗೋಳಮಠ ಅವರು ಶುಕ್ರವಾರ ತಿಳಿಸಿದ್ದಾರೆ.

ಹಿಂದುಳಿದ ಅ ವರ್ಗಕ್ಕೆ ಮೀಸಲಿರುವ ಈ ಕ್ಷೇತ್ರಕ್ಕೆ ಕಾಂಗ್ರೇಸ್ ಬೆಂಬಲಿತ ಜೆಡಿಎಸ್ ಪಕ್ಷದ ಅಭ್ಯಥರ್ಿ ಈರಮ್ಮ ಶಾಂತಪ್ಪ ಬಿರಾದಾರ ಅವರು 2 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇವರಿಗೆ 2779 ಮತಗಳು ಬಿದ್ದರೆ ಬಿಜೆಪಿ ಅಭ್ಯಥರ್ಿ ಶ್ರೀಮಂತ ಶರಣಪ್ಪ ರಾಮನಳ್ಳಿ ಅವರಿಗೆ 2777 ಮತಗಳು ಬಿದ್ದಿವೆ. 67 ನೋಟಾ ಮತಗಳು ದಾಖಲಾಗಿವೆ. 

ವಿಜಯೋತ್ಸವ : ಜೆಡಿಎಸ್ ಅಭ್ಯಥರ್ಿ ಈರಮ್ಮ ಶಾಂತಪ್ಪ ಬಿರಾದಾರ ಅವರು ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಸಚಿವ ಎಂ.ಸಿ.ಮನಗೂಳಿ ಅವರ ಮನೆ ಮುಂದೆ ಪಕ್ಷದ ಕಾರ್ಯಕರ್ತರು ಪರಸ್ಪರ ಗುಲಾಲ ಎರಚಿ, ಸಿಹಿ ಹಂಚಿ ಪಟಾಕ್ಷಿ ಹಾರಿಸುವ ಮೂಲಕ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದರು.

ಜೆಡಿಎಸ್ ಯುವ ಮುಖಂಡ ಅಶೋಕ ಮನಗೂಳಿ, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಅವರು ಮಾತನಾಡಿದರು. ಪಕ್ಷದ ಹಿರಿಯ ಮುಖಂಡರಾದ ಗುರಣ್ಣಗೌಡ ಪಾಟೀಲ ನಾಗಾವಿ ಬಿ.ಕೆ., ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಸಿದ್ರಾಮಪ್ಪ ರಂಜಣಗಿ, ಶೈಲಾ ಸ್ಥಾವರಮಠ, ಇಮ್ತಿಹಾಜ ಖತಿಬ, ರಮೇಶ ಹೂಗಾರ, ಚನ್ನು ಪಟ್ಟಣಶೆಟ್ಟಿ, ಶಿವಾನಂದ ಹರನಾಳ, ಖಾಧರ ಬಂಕಲಗಿ ಸೇರಿದಂತೆ ಪಕ್ಷದ ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.