ಹೊಸಪೇಟೆ 22: ನಗರದಲ್ಲಿ ಮುಸ್ಲಿಂ ಬಾಂಧವರು ಪ್ರವಾದಿ ಮಹ್ಮದ್ ಪೈಗಂಬರವರ ಜನ್ಮ ದಿನವಾದ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.
ನಗರದ ಈದ್ಗಾ ಮೈದಾನದಿಂದ ರಾಮಾ ಟಾಕೀಸ್ ವೃತ್ತ, ಉದ್ಯೋಗ ಪೆಟ್ರೋಲ್ ಬಂಕ್, ರೋಟರಿ ವೃತ್ತ, ಪೂಣ್ಯಮೂತರ್ಿ ವೃತ್ತ, ಗಾಂಧಿ ವೃತ್ತದವರೆಗೆ ಮೆರವಣೆಗೆ ಸಾಗಿತು, ಬಳಿಕ ಮೀರಾಲಾಂ ಟಾಕೀಸ್ ಬಳಿ ಧಾಮರ್ಿಕ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಮೆರವಣೆಗೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಧಾಮರ್ಿಕ ಸಭೆಯಲ್ಲಿ ಬಳ್ಳಾರಿ ಲೋಕಸಬಾ ಸದಸ್ಯರಾದ ಸನ್ಮಾನ್ಯ ಶ್ರೀ ವಿ.ಎಸ್. ಉಗ್ರಪ್ಪರವರು, ಹೊಸಪೇಟೆ ಉಪ ವಿಭಾಗಾಧಿಕಾರಿಗಳಾದ ಲೋಕೇಶ್ ರವರು, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಅಧ್ಯಕ್ಷರಾದ ಬಿ.ವಿ ಶಿವಯೋಗಿರವರು, ಮಾಜಿ ಶಾಸಕ ರತನ್ ಸಿಂಗ್, ಮುನ್ನ ಸಿಂಗ್, ಹಾಗು ಕಾಂಗ್ರೆಸ್ ಮುಖಂಡರಾದ ಹೆಚ್.ಎನ್. ಮಹ್ಮದ್ ಇಮಾಮ್ ನಿಯಾಜಿ , ಸಯ್ಯದ್ಖಾದರ್ರಫ್ಫಾಯಿ, ವಾಹೀದ್, ಶಂಶುಲ್ಲಾ ಖಾನ್, ಗುಜ್ಜಲ್ ನಾಗರಾಜ್, ಮಿಲಾದ್ ಕಮಿಟಿಯ ಅಧ್ಯಕ್ಷರಾದ ಬಡಾವಲಿ, ಹಾಗು ಪದಾಧಿಕಾರಿಗಳು, ಬಿಕಾಂ ಮಾಬುಸಾಬ್, ಫಹೀಮ್ ಬಾಷಾ, ಖಾಜಾ ಹುಸೇನ್ ನಿಯಾಜಿ, ರೌಫ್ ಸಾಬ್, ಗೌಸ್, ಖಲಂದರ್, ಮಹಮ್ಮದ್ ಗೌಸ್, ಹಾಗೂ ಎಲ್ಲಾ ಸಮಾಜಗಳ ಮುಖಂಡರುಗಳು ಭಾಗವಹಿಸಿದ್ದರು.