ಪರಿಸರ ಸ್ನೇಹಿ ದೀಪಾವಳಿ ಆಚರಿಸಿ : ಸಂಜಯ ಕುಲಿಗೋಡ ಮುಗಳಖೋಡ ಸಾರ್ವಜನಿಕ ಜನಜಾಗೃತಾ ಅಭಿಯಾನದಲ್ಲಿ ಅಭಿಮತ

ಲೋಕದರ್ಶನ ವರದಿ

ಮುಗಳಖೋಡ, 5: ಇಂದು ನಮ್ಮ ವಾತಾರಣದಲ್ಲಿ ಸಾಕಷ್ಟು ಏರುಪೇರುಗಳಾಗುತ್ತಿದ್ದು, ಇಂದು ನಾವು ಬಳಸುವ ವಾಹನದಿಂದ ಬರುವ ಹೊಗೆ, ಇಂಧನದ ಧಹನ, ಹಬ್ಬಗಳಲ್ಲಿ ಸಿಡಿಮದ್ದು, ಪಟಾಕಿಗಳನ್ನು ಸುಡವದರಿಂದಾಗಿ ವಾತಾವರಣ ಕಲುಸಿತವಾಗಿ, ಜನಸಾಮಾನ್ಯರಿಗೆ ಉಸಿರಾಟಿನ ತೊಂದರೆಯಾಗುತ್ತಿದೆ. ಇಂದು ಇದಕ್ಕೆ ದೆಹಲಿಯಲ್ಲಿ ಇರುವ ವಾತಾವರಣ ನಿದರ್ಶನವಾಗಿದೆ. ಹಾಗಾಗಿ ನಾವೇಲ್ಲರೂ ಪಟಾಕಿ ಮುಕ್ತ ಹಬ್ಬಗಳನ್ನು ಆಚರಿಸಿ, ಪರಿಸರ ಸ್ನೇಹಿ ವಾತಾವರಣವನ್ನು ಬೆಳೆಸೋಣ ಎಂದು ಸಂಸ್ಥೆಯ ಅಧ್ಯಕ್ಷ ಸಂಜಯ ಕುಲಿಗೋಡ ಹೇಳಿದರು.

       ಅವರು ಪಟ್ಟಣದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಪುರಸಭೆ ಕಾಯರ್ಾಲಯ ಮುಗಳಖೋಡ ಇದರ ಆಶ್ರಯಲ್ಲಿ ಇದೇ ಸೋಮವಾರ ದಿ 05ರಂದು ಸಾರ್ವಜನಿಕ ಜನಜಾಗೃತಾ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಾವೇಲ್ಲರೂ ಪರಿಸರ ಸಂರಕ್ಷಣೆಗೆ ಕಾಳಜಿ ವಹಿಸಿ, ಗಿಡಗಳನ್ನು ನೆಟ್ಟು ಬೆಳೆಸೋಣ. ಹಬ್ಬಗಳಲ್ಲಿ ಸಿಡಿಮದ್ದು ಪಟಾಕಿಯನ್ನು ಸುಡದೆ ಸರಳವಾದ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸೋಣ ಕರೆ ನೀಡಿದರು.

    ಪುರಸಭೆ ಮುಖ್ಯಾಧೀಕಾರಿ ಮಹಾವೀರ ಬೋರನ್ನವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾವೇಲ್ಲರೂ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸರಿಯಾದ ಜಾಗದಲ್ಲಿ ಇಡಬೇಕು, ನಮ್ಮ ಪರಿಸರವನ್ನು ವಾತಾವರಣವನ್ನು ಸ್ವಚ್ಚವಾಗಿಡಲೂ ನಾವೇಲರೂ ಶ್ರಮಿಸೋಣ, ನಮ್ಮ ಗ್ರಾಮವನ್ನು ಸ್ವಚ್ಚಂದವಾಗಿ ಮಾಡೋಣ ಎಂದು ಪ್ರಮಾಣ ದಿಕ್ಷೆಯನ್ನು ನಡೆಸುವರದ ಮೂಲಕ ಜನರಲ್ಲಿ ಅರಿವು ಮೂಡಿಸಿದರು.

    ನಂತರ ಈ ಕಾರ್ಯಕ್ರಮದಲ್ಲಿ ಪಟ್ಟಣದ ಮನೆ-ಮನೆಗೆ, ಅಂಗಡಿಗಳಿಗೆ ತೆರಳಿ ಸ್ವಚ್ಛ ಕಡೆಗೆ ನಮ್ಮ ಹೆಜ್ಜೆ, ಪರಿಸರ ಕಾಳಜಿ, ಶಿಕ್ಷಣದ ಜಾಗೃತಿ, ಶೌಚಾಲಯ ಜಾಗೃತಿ, ಪರಿಸರ ಮಾಲಿನ್ಯ ಜಾಗೃತಿ, ಮಹಿಳೆಯರ ಸಂರಕ್ಷಣೆ ಸಬಲೀಕರಣ ಜಾಗೃತಿ ಮೊದಲಾದ ವಿಷಯಗಳನ್ನು ಕುರಿತು ಜನಜಾಗೃತ  ತಿಳುವಳಿಕಾ ಅಭಿಯಾನ ಶಾಲಾ ಕಾಲೇಜು ಶಿಕ್ಷಕರಿಂದ ಹಾಗೂ ಶಾಲಾ ಕಾಲೇಜು ಮಕ್ಕಳಿಂದ ನಡೆಯಿತು. 

     ಈ ಅಭಿಯಾನದಲ್ಲಿ ಪ್ರಕಾಶ ಆದಪ್ಪಗೋಳ, ವಿಜಯ ನಾಯಿಕ, ಡಾ.ವಿ.ಕೆ.ನಡೋಣಿ, ಎಂ.ಕೆ.ಬೀಳಗಿ, ಎಸ್.ಎಸ್.ಮಧಾಳೆ, ಪ್ರಕಾಶ ಕಂಬಾರ, ಮಾನಿಂಗ ಮುಧೋಳ, ಕೆ.ಎನ್.ಮೂಲಿಮನಿ, ಬಿ.ಎ.ಕೊಪ್ಪದ, ರವಿ ಹಳ್ಳೂರ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಂಸ್ಥೆಯ ಬಾ.ಸಿ.ಮಠಪತಿ ಪ್ರಾಥಮಿಕ ಶಾಲೆ, ರೈನಬೋ ಸೇಂಟ್ರಲ್ ಸ್ಕೂಲ್, ಬ.ನೀ.ಕುಲಿಗೋಡ ಪ್ರೌಢಶಾಲೆ ಹಾಗೂ ಪದವಿ-ಪೂರ್ವ ಕಾಲೇಜು, ಐ.ಟಿ.ಐ ಕಾಲೇಜು ಹಾಗೂ ಡಾ.ಸಿ.ಬಿ.ಕುಲಿಗೋಡ ಪದವಿ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ ವರ್ಗದವರು ಹಾಗೂ ಎಲ್ಲ ವಿಭಾಗದ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.