ಜಮ್ಮು, ಸೆ 16 ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡು ದಾಳಿ ನಡೆಸಿ ಕದನ ವಿರಾಮವನ್ನು ಉಲ್ಲಂಘಿಸಿದ ಪರಿಣಾಮ ಕನಿಷ್ಠ ಮೂವರು ಯೋಧರು ಗಾಯಗೊಂಡಿದ್ದಾರೆ
"ಪಾಕಿಸ್ತಾನ ಸೇನೆಯು ಭಾನುವಾರ ತಡರಾತ್ರಿ ಪೂಂಚ್ನಲ್ಲಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಮತ್ತು ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದೆ. ಇದರಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆಂದು" ಸೇನೆಯ ಅಧಿಕೃತ ಮೂಲಗಳು ತಿಳಿಸಿವೆ.
ಯೋದರು ಗಸ್ತು ತಿರುಗುತ್ತಿದ್ದ ವೇಳೆ ಪಾಕಿಸ್ತಾನ ಸೇನೆಯು ಗುಂಡು ಹಾರಿಸಿದೆ. ಆದ್ದರಿಂದ ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
"ಭಾನುವಾರ ರಾತ್ರಿ ಸುಮಾರು 2230 ಗಂಟೆಗೆ ಪಾಕ್ ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ಅಪ್ರಚೋದಿತ ದಾಳಿ ನಡೆಸಿ ಕದನ ವಿರಾಮ ಉಲ್ಲಂಘನೆಗೆ ಚಾಲನೆ ನೀಡಿತ್ತು ಮತ್ತು ಪೂಂಚ್ ಜಿಲ್ಲೆಯ ಮೆಂಧಾರ್ ಸೆಕ್ಟರ್ನ ಬಾಲಕೋಟೆ ಎಂಬಲ್ಲಿ ಮೊಟರ್ಾರ್ಗಳೊಂದಿಗೆ ತೀವ್ರವಾದ ಶೆಲ್ ದಾಳಿ ನಡೆಸಿತು." ಎಂದು ಮಾಹಿತಿ ನೀಡಿದ ರಕ್ಷಣಾ ವಕ್ತಾರರು ಇದಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆಯ ಗುಂಡು ಹಾರಿಸಿದೆ ಎಂದಿದ್ದಾರೆ.
ಕಳೆದ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಪಾಕಿಸ್ತಾನವು ರಾಜೌರಿ ಮತ್ತು ಪೂಂಚ್ ವಲಯಗಳ ಗಡಿ ನಿಯಂತ್ರಣ ರೇಖೆಯ ಮೇಲೆ ಪದೇ-ಪದೆ ಗುಂಡು ಹಾರಿಸುತ್ತಿದೆ ಎಂದು ಇಲ್ಲಿ ಉಲ್ಲೇಖಿಸಬಹುದಾಗಿದೆ.