ಕೆಎಲ್ಇ ಅಧ್ಯಕ್ಷರಾಗಿ ಕೌಜಲಗಿ, ಕಾಯರ್ಾಧ್ಯಕ್ಷರಾಗಿ ಕೋರೆ ಅವಿರೋಧ ಆಯ್ಕೆ

ಬೆಳಗಾವಿ : ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಕೆಎಲ್ಇ ಸಂಸ್ಥೆಯ ಅದ್ಯಕ್ಷರಾಗಿ ಮಹಾಂತೇಶ್ ಕೌಜಲಗಿ, ಕಾಯರ್ಾದ್ಯಕ್ಷರಾಗಿ ಪ್ರಭಾಕರ ಕೋರೆ ಅವರುಗಳು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ ಎಂದು ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ತಿಳಿಸಿದರು.

ನಗರದಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 104 ವರ್ಷಗಳ ಇತಿಹಾಸ, 270 ಅಂಗ ಸಂಸ್ಥೆಗಳನ್ನು ಹೊಂದಿರುವ 16 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು, ಒಂದು ಲಕ್ಷ 25 ಸಾವಿರಕ್ಕೂ ಹೆಚ್ವು ವಿದ್ಯಾಥರ್ಿಗಳನ್ನು ಹೊಂದಿರುವ ಕೆಎಲ್ಇ ಸಂಸ್ಥೆಯಲ್ಲಿ ಸತತವಾಗಿ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಪ್ರಜಾಪ್ರಭುತ್ವದ ಅಡಿ ಸಂಸ್ಥೆ ಕೆಲಸ ಮಾಡುತ್ತಿದೆ ಎನ್ನುವದು ಹೆಮ್ಮೆಯ ವಿಷಯವಾಗಿದೆ ಎಂದು ಪ್ರಭಾಕರ ಕೋರೆ ಹೇಳಿದರು.

ಕೆಎಲ್ಇ ನೂತನ ಅಧ್ಯಕ್ಷರಾಗಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಉಪಾಧ್ಯಕ್ಷರಾಗಿ ವೀರುಪಾಕ್ಷಪ್ಪ ಹನಜಿ, ಶಿವಲಿಂಗಪ್ಪ ತಟ್ಟೇವಾಡಿ ಆಯ್ಕೆಯಾಗಿದ್ದಾರೆ. ನಿದರ್ೆಶಕರಾಗಿ ಅಶೋಕ ಬಾಗೇವಾಡಿ, ಮಹಾಂತೇಶ ಕವಟಗಿಮಠ, ಅಮಿತ್ ಕೋರೆ, ಮಹಾದೇವಪ್ಪ ಮುನವಳ್ಳಿ, ಈಶ್ವರಪ್ಪ ಮುನವಳ್ಳಿ, ರುದ್ರಗೌಡ ಪಾಟೀಲ, ಡಾ. ವಿ.ಐ. ಪಾಟೀಲ, ಶಿವಯೊಗ್ಗಪ್ಪ ಪಾಟೀಲ, ವಿಜಯ ಬಸಪ್ಪ ಪಟ್ಟೇದ, ವೀರುಪಾಕ್ಷಿ ಸಾಧುನ್ನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು. 

ಸಂಸ್ಥೆ  ಭಾಷಾತೀತವಾಗಿ, ಜಾತ್ಯಾ ತೀತವಾಗಿ ಕೆಎಲ್ಇ ಸಂಸ್ಥೆ ಸೇವೆ ನೀಡುತ್ತ ಬಂದಿದೆ. ಬರುವ ಮೂರು ವರ್ಷದಲ್ಲಿ ಹುಬ್ಬಳ್ಳಿಯಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ಕೆಎಲ್ಇ ಮೆಡಿಕಲ್ ಕಾಲೇಜು, ಬೆಂಗಳೂರಿನಲ್ಲಿ 300 ಕೋಟಿ ರೂ. ವೆಚ್ಚದಲ್ಲಿ 600 ಹಾಸಿಗೆಯುಳ್ಳ ಆಸ್ಪತ್ರೆ. ಮುಂಬೈನಲ್ಲಿ ಕಾಲೇಜು, ಪುಣೆಯಲ್ಲಿ 200 ಹಾಸಿಗೆಯ ಆಸ್ಪತ್ರೆ ಉದ್ಘಾಟನೆ. ಹಾಗೂ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಗಾಗಿ 120 ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಲಾಗುವುದು ಎಂದು ತಿಳಿಸಿದರು.

ಸಾಂಬ್ರಾದಲ್ಲಿ ಅಲೋಪಥಿಕ್ ಆಸ್ಪತ್ರೆ ನಿಮರ್ಾಣ, ಚಿಕ್ಕೋಡಿಯಲ್ಲಿ ಸಿಬಿಎಸ್ಸಿ ಶಾಲೆ ನಿಮರ್ಾಣ ಸೇರಿದಂತೆ ಮಹಾರಾಷ್ಟ್ರದ ಭಾಗದಲ್ಲಿ ಆಸ್ಪತ್ರೆ ನಿಮರ್ಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು. ಶಿವಾನಂದ ಕೌಜಲಗಿ, ಮಹಾಂತೇಶ ಕವಟಗಿಮಠ, ಅಮಿತ ಕೋರೆ, ಮಹಾಂತೇಶ ಕೌಜಲಗಿ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.