ಕೌಲಾಲಂಪುರ, ಜ 13,ಮಲೇಷ್ಯಾದಲ್ಲಿ ಸೋಮವಾರ ಬೆಳಗ್ಗೆ ವಿಶ್ವದ ಅಗ್ರ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ ಕೆಂಟೊ ಮೊಮೊಟಾ ಅವರು ರಸ್ತೆ ಅಪಘಾತದಿಂದ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 25ರ ಪ್ರಾಯದ ಆಟಗಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್ ಹಾಗೂ ಬ್ಯಾಡ್ಮಿಂಟನ್ ಅಧಿಕಾರಿಗಳು ತಿಳಿಸಿದ್ದಾರೆ.ಮೊಮೋಟಾ ಅವರನ್ನು ಕೌಲಾಲಂಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಎಲ್‌ಐಎ)ಕರೆದೊಯ್ಯುತ್ತಿದ್ದ ವ್ಯಾನ್ ಹಿಂದಿನಿಂದ 30 ಟನ್ ಲಾರಿಗೆ ಡಿಕ್ಕಿ ಹೊಡೆದಿದ್ದು, ವ್ಯಾನ್‌ನ ಮಲೇಷ್ಯಾದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪೊಲೀಸರು ಮತ್ತು ಸ್ಥಳೀಯ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ವ್ಯಾನ್‌ನಲ್ಲಿದ್ದ ಯುಕೆ ಬ್ಯಾಡ್ಮಿಂಟನ್ ಅಧಿಕಾರಿ ವಿಲಿಯಂ ಥಾಮಸ್, ಜಪಾನಿನ ಸಹಾಯಕ ಕೋಚ್ ಹಿರಾಯಾಮ ಯು ಮತ್ತು ಫಿಜಿಯಾಲಿಜಿ ಮೊರಿಮೊಟೊ ಅರ್ಕಿಫುಕಿ ಅವರಿಗೆ ಸಣ್ಣಪುಟ್ಟ ಗಾಯಗಲಾಗಿದ್ಚಿದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.ಮೊಮೊಟಾ ಅವರ ಮುಖ, ಮೂಗು ಹಾಗೂ ತುಟಿಯ ಭಾಗದಲ್ಲಿ ಗಾಯವಾಗಿದೆ. ಇನ್ನುಳಿದ ಮೂವರಿಗೆ ಮುಖ, ಕೈಗಳಲ್ಲಿ ಗಾಯವಾಗಿದೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಮಲೇಷ್ಯಾದ ಯುವ ಮತ್ತು ಕ್ರೀಡಾ ಸಚಿವ ಸೈಯದ್ ಸಾದಿಕ್ ಅವರು ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಾಲ್ವರ ಸ್ಥಿತಿ ಸ್ಥಿರವಾಗಿದೆ. ಅವರು ಉತ್ತಮ ಚಿಕಿತ್ಸೆಯನ್ನು ಪಡೆಯಲಿದ್ದು, ಅವರ ಮೇಲೆ ಸೂಕ್ಷ್ಮ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.