ಅನರ್ಹ ಶಾಸಕರ ಪ್ರಕರಣದ ತೀಪು : ಉಪಚುನಾವಣೆಯ ಮೇಲೆ ತೂಗುಗತ್ತಿ ?

ನವದೆಹಲಿ, ನ 8:      ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿರುವ, ರಾಜ್ಯ ಬಿಜೆಪಿ ಸರ್ಕಾರದ ಅಳಿವು - ಉಳಿವು ತೀರ್ಮಾನಿಸಲಿರುವ ಅನರ್ಹ ಶಾಸಕರ ಪ್ರಕರಣದ ತೀಪು ಶುಕ್ರವಾರ ಪ್ರಕಟವಾಗುವುದೇ?         ಈ ಮೊದಲು ನಿಗದಿಯಾಗಿದ್ದಂತೆ ತೀಪು ಶುಕ್ರವಾರ ಪ್ರಕಟವಾಗಲಿದೆ ಎಂಬ ನಿರೀಕ್ಷೆ ಹೊಂದಲಾಗಿತ್ತು. ಸೋಮವಾರದಿಂದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ತೀಪು ಹೊರಬರದಿದ್ದರೆ ಉಪಚುನಾವಣೆಯ ಗತಿ ಏನು ಎಂಬ ಆತಂಕ, ದುಗುಡ ಅನರ್ಹ ಶಾಸಕರಲ್ಲಿ ಮನೆ ಮಾಡಿದೆ.         ಸೋಮವಾರದಿಂದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಉಪಚುನಾವಣೆಯ ಮೇಲೆ ಒಂದು ರೀತಿ ತೂಗುಗತ್ತಿ ನೇತಾಡುತ್ತಿದೆ. ಈ ನಡುವೆ ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಉಪಚುನಾವಣೆಯನ್ನು ಮುಂದೂಡುವಂತೆ ಅನರ್ಹ ಶಾಸಕರು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.         ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಅದನ್ನು ಅಂಗೀಕಾರ ಮಾಡುವ ಬದಲಿಗೆ ಹಿಂದಿನ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಏಕಾಏಕಿ ಅನರ್ಹಗೊಳಿಸಿರುವ ಸಿಂಧುತ್ವವನ್ನು ಶಾಸಕರು ಪ್ರಶ್ನೆ ಮಾಡಿದ್ದಾರೆ.         ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆಯ ನಂತರ ತೀರ್ಪನ್ನು ಕಾಯ್ದಿರಿಸಿದೆ. ಶುಕ್ರವಾರ ತೀಪು ಪ್ರಕಟವಾಗದೇ ಇದ್ದಲ್ಲಿ ಸೋಮವಾರ ಹೊಸ ಬೆಳವಣಿಗೆಗಳು ನಡೆಯುವ ಸಾಧ್ಯತೆ ದಟ್ಟವಾಗಿದೆ.