ನವದೆಹಲಿ, ಡಿ ೧೬ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ನಿನ್ನೆ
ನಡೆದ ಗಲಭೆಗಳ ಬಗ್ಗೆ ಕುಲಪತಿ ನಜ್ಮಾ ಅಖ್ತರ್ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯದ
ವಿದ್ಯಾರ್ಥಿಗಳ ಬೆಂಬಲವಾಗಿ ನಿಂತಿರುವ
ಅವರು. ದೆಹಲಿ ಪೊಲೀಸರು ಅನುಮತಿಯಿಲ್ಲದೆ
ವಿಶ್ವವಿದ್ಯಾಲಯ ಪ್ರವೇಶಿಸಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ
ಎಸಗಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ
ಆರೋಪಿಸಿದರು.ವಿಶ್ವವಿದ್ಯಾಲಯವನ್ನು ಅಕ್ರಮವಾಗಿ ಪ್ರವೇಶಿಸಿ,
ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿರುವ
ಪೊಲೀಸ್ ಸಿಬ್ಬಂದಿ ವಿರುದ್ದ ಮೊಕದ್ದಮೆ ಹೂಡಲಿದ್ದೇವೆ"
ಎಂದು ಘೋಷಿಸಿದರು.ಜಾಮಿಯಾ ವಿದ್ಯಾರ್ಥಿಗಳ ಮೇಲಿನ ಪೊಲೀಸರ ದೌರ್ಜನ್ಯ ತಮ್ಮನ್ನು ತೀವ್ರವಾಗಿ ಬಾಧಿಸಿದೆ. ವಿಶ್ವವಿದ್ಯಾನಿಲಯ ಆಸ್ತಿ ಪಾಸ್ತಿಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ.. ಈ ನಷ್ಟವನ್ನು ಯಾರು ಭರಿಸಬೇಕು? ಎಂದು ಪ್ರಶ್ನಿಸಿದ ಅವರು, ಕೇವಲ ಆಸ್ತಿ
ನಷ್ಟ ಮಾತ್ರವಲ್ಲ ... ಭಾವನಾತ್ಮಕವಾಗಿಯೂ ತೀವ್ರ
ನಷ್ಟವಾಗಿದೆ ಎಂದು ನೋವು ವ್ಯಕ್ತಪಡಿಸಿದರು.
ನಿನ್ನೆ ನಡೆದ ಘಟನೆಗಳು ಅತ್ಯಂತ ದುರದೃಷ್ಟಕರ. ಯಾವುದೇ
ವದಂತಿಗಳಿಗೆ ಕಿವಿಗೊಡಬೇಡಿ ಎಂದು ಎಲ್ಲರಲ್ಲೂ ಮನವಿ ಮಾಡಿದರು.ಪೊಲೀಸರು
ಗಲಭೆ ನಿಯಂತ್ರಿಸಲು ಯತ್ನಿಸಿದಾಗ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ
ಎಂದು ಹಬ್ಬಿರುವ ವರದಿಗಳನ್ನು
ಅವರು ತಳ್ಳಿಹಾಕಿದರು. “ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂಬ ದಟ್ಟ ವದಂತಿಗಳನ್ನು
ಹಬ್ಬಿಸಲಾಗುತ್ತಿದೆ. ಹಿಂಸಾಚಾರದಲ್ಲಿ ನಮ್ಮ ವಿವಿಯ
ಯಾವ ವಿದ್ಯಾರ್ಥಿಗಳು ಮೃತಪಟ್ಟಿಲ್ಲ ಈ ವದಂತಿಗಳನ್ನು
ತೀವ್ರವಾಗಿ ಖಂಡಿಸುವುದಾಗಿ ಕುಲಪತಿ ನುಡಿದರು.ದೆಹಲಿ ಪೊಲೀಸರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಗಳಿಗೆ
ಲೈಂಗಿಕ ಕಿರುಕುಳ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ
ಕುಲಪತಿ ನಜ್ಮಾ ಅಖ್ತರ್ ಹೌದು ಅಥವಾ ಇಲ್ಲ
ಎಂಬ ಸ್ಪಷ್ಟ ಉತ್ತರ ನೀಡಲಿಲ್ಲ. ದೆಹಲಿಯ
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ
ವೇಳೆ ಕೆಲವರು ಹಿಂಸಾಚಾರದಲ್ಲಿ
ತೊಡಗಿದ ಕಾರಣ ನಿನ್ನೆ
ಮಧ್ಯಾಹ್ನ ಗಲಭೆಗಳು ಭುಗಿಲೆದ್ದಿದ್ದವು. ನಾಲ್ಕು ಬಸ್ಸುಗಳಿಗೆ ಅಗ್ನಿ ಸ್ಪರ್ಶಮಾಡಲಾಯಿತು. ಒಂದು ಡಜನ್‌ಗೂ ಹೆಚ್ಚು ವಾಹನಗಳನ್ನು
ದ್ವಂಸಗೊಳಿಸಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ
ಸಿಬ್ಬಂದಿ ಮತ್ತು ಪೊಲೀಸರು ಮೇಲೆ ಕಲ್ಲು ತೂರಾಟ ಆರಂಭಗೊಂಡ ಕಾರಣ ತೀವ್ರ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.