ಜೀವನ ನಿರ್ವಹಣೆಯಲ್ಲಿ ವೃತ್ತಿಯೇ ಅವಿಭಾಜ್ಯ ಅಂಗ : ಗುಲ್ಜರ ಅಹ್ಮದ
Career is an integral part of life: Gulzar Ahmed
ಧಾರವಾಡ 07 : ವೈದ್ಯರು, ಶಿಕ್ಷಕರು, ಇಂಜಿನಿಯರ್ಗಳು, ವಿಜ್ಞಾನಿಗಳು, ವಕೀಲರು, ಮತ್ತು ಕಲಾಕಾರರು.ಹೀಗೆ ಕೆಲವು ನುರಿತ ಉದ್ಯೋಗಗಳನ್ನು ವೃತ್ತಿಗಳು ಎಂದು ಕರೆಯಲಾಗುತ್ತದೆ, ವೃತ್ತಿ ಎಂದರೆ, ವೃತ್ತಿಯು ಯಾವುದೇ ಉದ್ಯೋಗ, ವೃತ್ತಿ, ವ್ಯಾಪಾರ ಅಥವಾ ವೃತ್ತಿಯಾಗಿದ್ದು, ಒಂದು ನಿರ್ದಿಷ್ಟ ಮೊತ್ತಕ್ಕೆ ಪ್ರತಿಯಾಗಿ, ಗಂಟೆಗೊಮ್ಮೆ, ವಾರಕ್ಕೊಮ್ಮೆ, ಮಾಸಿಕ ವೇತನ ಪಡೆಯುವವರಾಗಿದ್ದಾರೆ. ಪರಿಣತಿ ಮತ್ತು ತರಬೇತಿ, ಜೀವನೋಪಾಯ, ಉದ್ದೇಶ, ವೃತ್ತಿಜೀವನ ಇವು ವೃತ್ತಿಯ ಪ್ರಮುಖ ಲಕ್ಷಣಗಳಾಗಿವೆ, ಎಂದು ದೇವರಹುಬ್ಬಳ್ಳಿಯ ಗ್ರಾಮ ಪಂಚಾಯತದ ಆಡಳಿತ ಅಧಿಕಾರಿ ಗುಲ್ಜರ ಅಹ್ಮದ ಮಾತನಾಡಿದರು. ಅವರು ದೇವರ ಹುಬ್ಬಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಹೆಣ್ಣುಮಕ್ಕಳಿಗಾಗಿ ವೃತ್ತಿಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನ ನಿರ್ವಹಣೆಯಲ್ಲಿ ವೃತ್ತಿಯೇ ಅವಿಭಾಜ್ಯ ಅಂಗವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.ಹುಬ್ಬಳ್ಲಿಯ ಮಂಗಳೂರು ಆವಂತಿ ಪಿ ಯು ಕಾಲೇಜಿನ ನಿರ್ದೇಶಕರಾದ ಪ್ರದೀಪ ಶೆಟ್ಟಿ ಅವರು ವೃತ್ತಿ ಮಾರ್ಗದರ್ಶನದ ಕುರಿತು ಉಪನ್ಯಾಸ ನೀಡಿದರು.
ನಾಗಶಾಂತಿ ಕೀಯಾ ಕಂಪನಿಯ ನಿರ್ದೇಶಕರಾದ ಅರುಣ ಅಂಗಡಿ, ಮುಖ್ಯ ಅಥಿತಿಯಾಗಿ ಮಾತನಾಡಿದರು, ಸಂಸ್ಥೆಯ ಮುಖ್ಯಸ್ಥರಾದ ಡಾ, ನಾಜೀಯಾ ಮುದೋಳ ಅವರು ಅಧ್ಯಕ್ಷತೆ ವಹಿಸಿದ್ದರು. ವೃತ್ತಿಯು ಜೀವನ ನಿರ್ವಹಣೆ ಮಾಡುವ ಕೆಲಸವೆಂಬುದನ್ನು ನಮ್ಮ ಶರಣರಾದ ಬಸವಣ್ಣನವರು "ಕಾಯಕವೇ ಕೈಲಾಸ " ವೆಂಬುದನ್ನು ಮಾಮ್ರಿಕವಾಗಿ 12ನೇ ಶತಮಾನ ದಲ್ಲಿಯೇ ತಿಳಿಸಿದ್ದಾರೆ. ಜೀವನ ನಿರ್ವಹಣೆಯಲ್ಲಿ ವೃತ್ತಿಯೇ ಅವಿಭಾಜ್ಯ ಅಂಗ. ಇದು ಇಲ್ಲದಿದ್ದರೆ ಜೀವನದಲ್ಲಿ ಕಷ್ಟನಷ್ಟಗಳು ಮತ್ತು ಸೋಲು ನಿಶ್ಚಯ. ವೃತ್ತಿ ಇಲ್ಲದವನು ಸೋಮಾರಿಯಾಗಿ ಅಲೆದು ಸಮಾಜಕ್ಕೆ ಕಂಟಕಪ್ರಾಯನಾಗುತ್ತಾನೆ. ಎಂದು ಪ್ರಾಸ್ತಾವಿಕ ಮಾತನಾಡುತ್ತಾ ಸಾಹಿತಿ ನಾರಾಯಣ ಭಜಂತ್ರಿ ಅವರು ಎಲ್ಲರನ್ನು ಸ್ಚಾಗತಿಸಿದರು. ಸಮಾಜವಿಜ್ಞಾನ ಶಿಕ್ಷಕ ಶಶಿಧರ ದಮ್ಮಳ್ಳಿ ನಿರೂಪಿಸಿದರು. ವಿದ್ಯಾರ್ಥಿಗಳಾದ ಸೌಭಾಗ್ಯಾ, ನಮ್ರತಾ ಇವರು ಪ್ರಾರ್ಥನೆ ಹೇಳಿದರು, ವಿಜ್ಞಾನ ಶಿಕ್ಷಕ ಎಚ್ ಎಮ್ ಸೋಮನಾಥ ಒಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 