ಶ್ರೀ ಬಾಲಾಜಿ ದೇವಸ್ಥಾನದ 39ನೇ ವಾರ್ಷಿಕೋತ್ಸವ

ಶ್ರೀ ಬಾಲಾಜಿ ದೇವಸ್ಥಾನದ 39ನೇ ವಾರ್ಷಿಕೋತ್ಸವ 39th Anniversary of Sri Balaji Temple

ಲೋಕದರ್ಶನ ವರದಿ 

ಬೆಟಗೇರಿ, 25 : ಸುಮಾರು 91 ವರ್ಷಗಳ ಹಿಂದೆ ಬೆಟಗೇರಿ ರಜಪೂತ ಗಲ್ಲಿಯಲ್ಲಿ ಚಿಕ್ಕದಾಗಿ ಶ್ರೀ ಬಾಲಾಜಿ ದೇವಸ್ಥಾನ ನಿರ್ಮಿಸಿದ್ದರು. ಸಮಾಜ ಬಾಂಧವರ, ಸದ್ಭಕ್ತರ ಸಹಾಯ ಸಹಕಾರದಿಂದ 1987 ರಲ್ಲಿ ದೇವಸ್ಥಾನ ನವೀಕರಣಗೊಂಡು ಹೊಸದಾಗಿ ಮೂರ್ತಿ ಪ್ರತಿಷ್ಠಾಪನೆಗೊಂಡಿತು. ದಿನಾಂಕ 28-4-2026 ಮಂಗಳವಾರ ಅದರ 40ನೇ ವಾರ್ಷಿಕೋತ್ಸವವು ಜರುಗಲಿದ್ದು ಅಂದು ಮುಂಜಾನೆ ವಿಶೇಷ ಪೂಜೆ, ಹುಬ್ಬಳ್ಳಿ ರಜಪೂತ ಮಹಿಳಾ ಮಂಡಳದವರಿಂದ 11 ಗಂಟೆಗೆ ವಿಷ್ಣು ಸಹಸ್ರನಾಮಾವಳಿ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಪ್ರಸಾದ ವ್ಯವಸ್ಥೆ (ಅನ್ನಸಂತರೆ​‍್ಣ) ಜರುಗಲಿದ್ದು ಸಮಸ್ತ ಸದ್ಭಕ್ತರು ಹಾಗೂ ರಜಪೂತ ಸಮಾಜ ಬಾಂಧವರು ಸಕ್ರೀಯವಾಗಿ ಪಾಲ್ಗೊಂಡು ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಲಾಗಿದೆ.