ಹೊಶಾಂಗಬಾದ್,ಅ 14: ಕಾರು ಅಪಘಾತವೊಂದರಲ್ಲಿ ನಾಲ್ವರು ರಾಷ್ಟ್ರೀಯ ಹಾಕಿ ಆಟಗಾರರು ಮೃತಪಟ್ಟು, ಇತರೆ ಇತರ ಮೂವರು ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ. ಧ್ಯಾನ್ಚಂದ್ ಟ್ರೋಫಿಗಾಗಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಭಾಗವಹಿಸಲು ಹಾಕಿ ಆಟಗಾರರು ಕಾರೊಂದರಲ್ಲಿ ಇಟಾರ್ಸ್ಯಿಂದ ಹೊಶಾಂಗಬಾದ್ಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾವನ್ನಪ್ಪಿರುವ ಹಾಗೂ ಗಾಯಗೊಂಡವರ ಗುರುತನ್ನು ಇನ್ನಷ್ಟೆ ಪತ್ತೆ ಹಚ್ಚಬೇಕಿದೆ.