ಲೋಕದರ್ಶನ ವರದಿ
ಧಾರವಾಡ, 26 : ಸರಕಾರದ ನಿಯಮಾವಳಿಯನ್ನು ಉಲ್ಲಂಘಿಸಿ ಅನಧಿಕೃತವಾಗಿ ಶಾಲೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ಥಳಾಂತರಿಸಿದ ಕಾರಣಕ್ಕಾಗಿ ಹುಬ್ಬಳ್ಳಿ ತಾಲೂಕು ನವನಗರದ ಶ್ರೀಸ್ವಾಮಿ ವಿವೇಕಾನಂದ ಸೋಸಿಯಲ್ ಆ್ಯಂಡ್ ಏಜ್ಯುಕೇಷನಲ್ ಟ್ರಸ್ಟ್ ನಡೆಸುತ್ತಿರುವ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ನೋಂದಣಿ ಹಾಗೂ ಶಿಕ್ಷಣ ಇಲಾಖೆಯು ನೀಡಿದ್ದ ಅನುಮತಿಯನ್ನು ರದ್ದುಪಡಿಸಿ ಶುಕ್ರವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿದರ್ೇಶಕರು ಅಧಿಸೂಚನೆ ಹೊರಡಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಉಪನಿದೇಶಕರು (ಡಿಡಿಪಿಐ) ಹಾಗೂ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ನೋಟೀಸನ್ನೂ ಸಹ ಗಂಭೀರವಾಗಿ ಪರಿಗಣಿಸದೇ ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಶಿಕ್ಷಣ ಇಲಾಖೆಯ ಪೂವರ್ಾನುಮತಿ ಪಡೆಯದೇ ಶ್ರೀಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯನ್ನು ಹುಬ್ಬಳ್ಳಿ ತಾಲೂಕು ನವನಗರದಿಂದ ಅನಧಿಕೃತವಾಗಿ ಹುಬ್ಬಳ್ಳಿ ತಾಲೂಕು ಭೈರಿದೇವರಕೊಪ್ಪದ ರಾಧಿಕಾ ಪಾರ್ಕ ಬಡಾವಣೆಗೆ ಸ್ಥಳಾಂತರಿಸಿರುವುದು ನಿಯಮ ಬಾಹಿರವಾಗಿರುತ್ತದೆ.
ಈ ಕುರಿತಂತೆ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜ. 14 ರಂದು ಹಾಗೂ ಜ.29ರಂದು ನೀಡಿರುವ ಇಲಾಖೆಯ ನೋಟೀಸುಗಳಿಗೆ ಶಾಲಾ ಆಡಳಿತ ಮಂಡಳಿಯವರು ಯಾವುದೇ ಕ್ರಮಕೈಕೊಳ್ಳದೇ ತಮಗೆ ತಿಳಿದಂತೆ ಶಾಲೆಯನ್ನು ಮುನ್ನಡೆಸುತ್ತಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕನರ್ಾಟಕ ಶಿಕ್ಷಣ ಅಧಿನಿಯಮ-1983ರ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಯಾಗಿರುವ ಶ್ರೀಸ್ವಾಮಿ ವಿವೇಕಾನಂದ ಸೋಸಿಯಲ್ ಆ್ಯಂಡ್ ಏಜ್ಯುಕೇಷನಲ್ ಟ್ರಸ್ಟ್ ಸರಕಾರದ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗಿರುವುದರಿಂದ, ಜೊತೆಗೆ ಅನಧಿಕೃತವಾಗಿ ಶಾಲೆಯನ್ನು ಸ್ಥಳಾಂತರಿಸಿರುವುದರಿಂದ ರಾಜ್ಯ ಸರಕಾರದ ಅಧಿಸೂಚನೆ ಸಂಖ್ಯೆ : ಇಡಿ/11/ಎಂ.ಪಿ.ಎಸ್.-2004 ಸೆ. 14ರ ಮೂಲಕ ಪ್ರದತ್ತವಾದ ಅಧಿಕಾರದನ್ವಯ ಕನರ್ಾಟಕ ಶಿಕ್ಷಣ ಅಧಿನಿಯಮ-1983ರ ಸೆಕ್ಷನ್ 34(2)ರ ಮೇರೆಗೆ ಅನುದಾನ ರಹಿತವಾಗಿ ನಡೆಯುತ್ತಿರುವ ಹುಬ್ಬಳ್ಳಿ ತಾಲೂಕು ನವನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಗೆ ನೀಡಲಾಗಿದ್ದ ಅಧಿಕೃತ ನೋಂದಣಿ ಹಾಗೂ ಇಲಾಖಾ ಅನುಮತಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿದರ್ೇಶಕರು ಅಧಿಸೂಚನೆ ಹೊರಡಿಸಿ ರದ್ದುಪಡಿಸಿದ್ದಾರೆ ಎಂದವರು ತಿಳಿಸಿದ್ದಾರೆ.
ಪಾಲಕರಿಗೆ ಸೂಚನೆ : ಬರುವ ಶೈಕ್ಷಣಿಕ ವರ್ಷ(2019-20)ದಲ್ಲಿ ಪಾಲಕರು ಹಾಗೂ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸುವ ಮೊದಲು ಶಾಲೆಯ ವಿವರಗಳನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಅವರಿಂದ ಪಡೆದುಕೊಂಡು ಶಾಲೆಯು ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ ಅಧಿಕೃತವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ತಮ್ಮ ಮಕ್ಕಳ ಪ್ರವೇಶ ಪಡೆದುಕೊಳ್ಳಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರು ಸೂಚಿಸಿದ್ದಾರೆ.