ಮಾಸ್ಕೊ, ಮೇ 18,ಬ್ರಿಟೀಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಕಾಮ್‍ಲೂಪ್ಸ್ ವಿಮಾನನಿಲ್ದಾಣದ ಸಮೀಪ ಕೆನಡಾ ವಾಯುಪಡೆಯ ಸ್ನೋ ಬರ್ಡ್ಸ್ ಏರೋಬ್ಯಾಟಿಕ್ಸ್ ತಂಡವಿದ್ದ ವಿಮಾನ ಪತನಗೊಂಡಿದೆ.ಕಾಮ್‍ಲೂಪ್ಸ್ ಸನಿಹದಲ್ಲಿ ಕೆನಡಾ ಪಡೆಗಳ ಸ್ನೋಬರ್ಡ್ಸ್ ವಿಮಾನ ಪತನಗೊಂಡಿರುವ ಬಗ್ಗೆ ತಿಳಿದುಬಂದಿರುವುದಾಗಿ ವಾಯುಪಡೆ ಟ್ವೀಟ್ ಮಾಡಿದೆ. ವಿಮಾನದಲ್ಲಿದ್ದ ಸಿಬ್ಬಂದಿಯ ಸ್ಥಿತಿ ಏನೆಂಬುದು ತಿಳಿಯುವುದು ಮುಖ್ಯವಾಗಿದೆ ಎಂದು ವಾಯುಪಡೆ ಹೇಳಿದೆ. ಸ್ಥಳೀಯ ಕೆಟಿಡಬ್ಲ್ಯೂ ದಿನಪತ್ರಿಕೆಯ ವರದಿಯಂತೆ ಪೈಲಟ್ ವಿಮಾನದಿಂದ ಜಿಗಿದಿದ್ದು, ಮನೆಯೊಂದರ ಮೇಲ್ಚಾವಣಿ ಮೇಲೆ ಕಂಡುಬಂದಿದ್ದಾನೆ.ದೇಶದ ಉದ್ದಗಲಕ್ಕೆ ಸಂಚಾರ ನಡೆಸುವ ವೇಳೆ ವಿಮಾನ ಮೇಲೇರುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಮನೆಯ ಮೇಲೆ ಪತನಗೊಂಡಿದೆ. ವಿಮಾನ ಬಿದ್ದ ತಕ್ಷಣ ಮನೆಗೆ ಬೆಂಕಿ ಹೊತ್ತಿಕೊಂಡಿದೆ.