ಅಂಬೇಡ್ಕರ್ ಪುತ್ಥಳಿ ಅನಾವರಣ : ಅದ್ಧೂರಿಯಾಗಿ ಭಾವಚಿತ್ರ ಮೆರವಣಿಗೆ
ಕಂಪ್ಲಿ 05: ಡಾ.ಬಿ.ಆರ್.ಅಂಬೇಡ್ಕರ್, ಬಸವ ಜಯಂತ್ಯೋತ್ಸವ ಅಂಗವಾಗಿ ಪಟ್ಟಣದಲ್ಲಿ ಛಲುವಾದಿ ಮಹಾಸಭಾದಿಂದ ಭಾವಚಿತ್ರ ಮೆರವಣಿಗೆ ಸೋಮವಾರ ಅದ್ಧೂರಿಯಾಗಿ ಜರುಗಿತು.
ಇಲ್ಲಿನ 4ನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದ ಮುಖ್ಯ ರಸ್ತೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಲಾಯಿತು. ನಂತರ ಶಾಸಕ ಜೆ.ಎನ್.ಗಣೇಶ್ ಇವರು ಪುತ್ಥಳಿ ಅನಾವರಣಗೊಳಿಸಿದ ನಂತರ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶಗಳನ್ನು ಯುವಕರು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಶರಣ, ಸಂತರ ಹಾಗೂ ಮಹಾನೀಯರ ತತ್ವಾದರ್ಶಗಳು ದಾರೀಪೀಪವಾಗಿವೆ ಎಂದರು.
ಶಾಲೆ ಬಳಿಯಲ್ಲಿ ಆರಂಭಗೊಂಡ ಮೆರವಣಿಗೆ ಪಟ್ಟಣದ ನಡುವಲ ಮಸೀದಿ, ಡಾ.ರಾಜಕುಮಾರ ಮುಖ್ಯರಸ್ತೆ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ, ದಿ.ಪುನೀತ್ ರಾಜಕುಮಾರ ವೃತ್ತದ ಮೂಲಕ ನಾಲ್ಕನೇ ವಾರ್ಡ್ ಶಾಲೆ ಬಳಿಯಲ್ಲಿ ಸಮಾವೇಶಗೊಂಡಿತು.
ಈ ಮೆರವಣಿಗೆ ತಾಷಾರಾಂಡೋಲ್, ಧ್ವನಿ ವರ್ಧಕದ ಹಾಡುಗಳಿಗೆ ಯುವಕರು ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಛಲುವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಸಿ.ಆರ್.ಹನುಮಂತ, ತಾಲೂಕು ಅಧ್ಯಕ್ಷ ಬಿ.ನಾಗೇಂದ್ರ, ಮುಖಂಡರಾದ ಎಂ.ಸಿ.ಮಾಯಪ್ಪ, ಡಾ.ಎ.ಸಿ.ದಾನಪ್ಪ, ಬಿ.ದೇವೇಂದ್ರ, ಸಿ.ಎಚ್.ವಿರುಪಾಕ್ಷಿ, ಮಾನ್ವಿ ಮಹೇಶ, ಹಬೀಬ್ ರೆಹಮಾನ್, ಕರಡಿ ರಘು, ಶಿವು, ಕೆ.ಚನ್ನ, ಎ.ಬಸುವ, ಟಿ.ವಿರುಪಣ್ಣ, ಶಶಿ, ದಾಸರ ಅಂಜಿನಿ ಸೇರಿದಂತೆ ಛಲುವಾದಿ ಸಮಾಜದವರು ಪಾಲ್ಗೊಂಡಿದ್ದರು.