ದೀಪ ಅಭಿಯಾನ ಯಶಸ್ವಿಗೆ ಕರೆ

ಬೆಂಗಳೂರು, ಏ.5,ಕೊರೋನಾ ವಿರುದ್ಧದ ದೀಪ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಸಚಿವರು ಮನವಿಮಾಡಿದ್ದಾರೆ.ಕೊರೋನಾ ವಿರುದ್ಧ ನಡೆಯುತ್ತಿರುವ ಈ ನಿರ್ಣಾಯಕ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯ ಒಂದಾಗಿ, ದೃಢನಿಶ್ಚಯದಿಂದ ಮುನ್ನಡೆಯಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವಂತೆ, ದೀಪ ಅಭಿಯಾನದ ಮೂಲಕ ನಾವೆಲ್ಲ ಭಾರತೀಯರು ಒಂದು ಎಂದು ಸಾಂಕೇತಿಕವಾಗಿ ಸಾರೋಣ, ಕೋವಿಡ್‌-19 ಹೆಮ್ಮಾರಿಯನ್ನು ಹಿಮ್ಮೆಟ್ಟಿಸೋಣ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು  ಕರೆ ಕೊಟ್ಟಂತೆ ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಕರುನಾಡಿನ ಸಮಸ್ತ ಜನತೆ ಸೇರಿ ತಮ್ಮ ಮನೆಗಳಲ್ಲಿ ಭಾರತ ಮಾತೆಯನ್ನು ಸ್ಮರಿಸಿಕೊಳ್ಳುತ್ತಾ ದೀಪ, ಮೊಂಬತ್ತಿ ಅಥವಾ ಮೊಬೈಲ್ ಟಾರ್ಚ್‌ ಹಚ್ಚುವುದರ ಮೂಲಕ ಭಾರತವನ್ನು ಬೆಳಗಿಸೋಣ ನಮ್ಮ ಉತ್ಸಾಹ ಧೈರ್ಯ, ಸಂಕಲ್ಪ ಮತ್ತು ಮಾನವೀಯತೆಗಿಂತ ದೊಡ್ಡ ಶಕ್ತಿ ಬೇರೊಂದಿಲ್ಲ. ಬನ್ನಿ ನಾವೆಲ್ಲರೂ ಒಟ್ಟಾಗಿ ಕೊರೋನಾವನ್ನು ಸೋಲಿಸಿ ಭಾರತ ಮಾತೆಯನ್ನು ಗೆಲ್ಲಿಸೋಣ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಮನವಿ ಮಾಡಿದ್ದಾರೆ.