ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಕರೆ

ನವದೆಹಲಿ 12 (ಯುಎನ್ಐ): ಜಾಗತಿಕ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ, ಬಹುದೊಡ್ಡ ಬೆದರಿಕೆಯಾಗಿದೆ. ಇದರ ವಿರುದ್ಧ ಎಲ್ಲಾ ಸಂಬಂಧಪಟ್ಟ ದೇಶಗಳು ಸ್ಪಷ್ಟ ಹಾಗೂ ನಿಣರ್ಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ. 

   ಟಕರ್ಿ ರಿಪಬ್ಲಿಕ್ನ ಅಧ್ಯಕ್ಷ ರಿಸಪ್ ತಯ್ಯಿಬ್ ಎರ್ಡಗಾನ್ ಅವರೊಂದಿಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ, ದೂರವಾಣಿ ಮೂಲಕ ಮಾತುಕತೆ ನಡೆಸಿದಾಗ ಈ ಹೇಳಿಕೆ ನೀಡಿದ್ದಾರೆ. 

   ಭಾರತದಲ್ಲಿ ಇತ್ತೀಚೆಗೆ ಉಗ್ರರು ನಡೆಸಿದ ದಾಳಿಯ ಸಂತ್ರಸ್ತರಿಗೆ ಸಂತಾಪ ಸೂಚಿಸಿದ ಅಧ್ಯಕ್ಷ ಎರ್ಡಗಾನ್, ದಾಳಿಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಆಶಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

   ಪ್ರಧಾನಿ ಮೋದಿ ಸೋಮವಾರ ಅಬುದಾಬಿಯ ರಾಜಕುಮಾರ ಮತ್ತು ಯುಎಇಎ ಸೇನಾ ಪಡೆಗಳ ಡೆಪ್ಯುಟಿ ಸುಪ್ರೀಂ ಕಮಾಂಡರ್, ಶೇಕ್ ಮುಹಮ್ಮದ್ ಬಿನ್ ಝಯಾದ್  ಅಲ್ ನಹ್ಯಾನ್ ಅವರೊಂದಿಗೂ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಎಲ್ಲಾ ಸುತ್ತಿನ ದ್ವಿಪಕ್ಷೀಯ ಸಹಕಾರ ವೃದ್ಧಿಗೊಳ್ಳುತ್ತಿರುವುದಕ್ಕೆ ಉಭಯ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. 

   ದ್ವಿಪಕ್ಷೀಯ ಸಮಗ್ರ ವ್ಯೂಹಾತ್ಮಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಲು ಉಭಯ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಎಂದು ಅದು ತಿಳಿಸಿದೆ. ಈ ವಾರದ ಆದಿಯಲ್ಲಿ ಅಬುದಾಬಿಯಲ್ಲಿ ನಡೆದ ಒಐಸಿ ವಿದೇಶಾಂಗ ಸಚಿವರ ಸಮಿತಿಯ ಸಭೆಗೆ ಭಾರತವನ್ನು ಗೌರವಾನ್ವಿತ ಅತಿಥಿಯ ಗೌರವ ನೀಡಿ ಮಾತನಾಡಲು ಅವಕಾಶ ನೀಡಿದ್ದಕ್ಕೆ ಇದೇ ವೇಳೆ ಪ್ರಧಾನಮಂತ್ರಿಯವರು ರಾಜಕುಮಾರನಿಗೆ ಧನ್ಯವಾದ ಹೇಳಿದರು. 

   ಜೆಇಎಂ ಮುಖ್ಯಸ್ಥ ಮಸೂದ್ ಅಝರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗೊತ್ತುವಳಿಗೆ ಬೆಂಬಲ ಪಡೆಯಲು ಭಾರತ ಅಂತಾರಾಷ್ಟ್ರೀಯ ಸಮುದಾಯಗಳೊಂದಿಗೆ ಮಾತುಕತೆಯಲ್ಲಿ ತೊಡಗಿದೆ. ಪುಲ್ವಾಮ ದಾಳಿಗೆ ಮಸೂದ್ ಕಾರಣ ಎಂದು ಭಾರತ ನಿರ್ಧರಿಸಿದೆ ಮತ್ತು ಆತನ ವಿರುದ್ಧ ಪಾಕಿಸ್ತಾನ ಮತ್ತು ಅಂತಾರಾಷ್ಟ್ರೀಯ ಸಮುದಾಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. 

   ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಭಾರತದ ಕಳವಳ ವಾಷಿಂಗ್ಟನ್ಗೆ ಅರ್ಥವಾಗುತ್ತದೆ ಎಂದು ವಿದೇಶಾಂಗ ಕಾರ್ಯದಶರ್ಿ ವಿಜಯ್ ಗೋಖಲೆ ಅವರೊಂದಿಗೆ ನಡೆದ ಮಾತುಕತೆಯ ವೇಳೆ ಅಮೆರಿಕ ಕಾರ್ಯದಶರ್ಿ ಮೈಕಲ್ ಹೇಳಿದ್ದಾರೆ.