ಲೋಕದರ್ಶನ ವರದಿ
ಬ್ಯಾಡಗಿ೦೪: ಪ್ರತಿಯೊಂದು ನೋಂದಾಯಿತ ಘಟಕಗಳು (ಕಾಖರ್ಾನೆಗಳು)ತಮ್ಮಲ್ಲಿ ಕೆಲಸ ಮಾಡುವಂತಹ ಕೂಲಿ ಕಾಮರ್ಿಕರಿಗೆ ಜೀವವಿಮೆ(ಜನರಲ್ ಇನ್ಸೂರೆನ್ಸ್) ಮಾಡಿಸುವುದು ಕಡ್ಡಾಯ, ಇದಕ್ಕೆ ತಪ್ಪಿದಲ್ಲಿ ಮುಂದಿನ ಎಲ್ಲ ಸಂಕಷ್ಟಗಳಿಗೆ ಘಟಕಗಳೇ ಮಾಲೀಕರೇ ಜವಾಬ್ದಾರರಾಗಬೇಕಾಗುತ್ತದೆ, ಕೂಲಿ ಕಾಮರ್ಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಆರೋಗ್ಯ ಸುರಕ್ಷತೆ ಹಾಗೂ ನಿದರ್ಿಷ್ಟವಾದ ಕೆಲಸಕ್ಕೆ ನಿಗದಿತ ವೇತನ ನೀಡುವಂತೆ ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್ ಹೊಸ್ಮನಿ ಕರೆ ನೀಡಿದರು.
ಕಾಮರ್ಿಕ ದಿನಾಚರಣೆ ಅಂಗವಾಗಿ ತಾಲ್ಲೂಕು ಕಾನೂನು ಅರಿವು ನೆರವು ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಪುರಸಭೆ ಇವರುಗಳು ಸಂಯುಕ್ತಾಶ್ರಯದಲ್ಲಿ ಪಟ್ಟಣದ ಪುರಸಭೆ ಆವರಣದಲ್ಲಿ ಜರುಗಿದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೂಲಿ ಕಾಮರ್ಿಕರನ್ನು ಅತ್ಯಂತ ಕೀಳಾಗಿ ಕಾಣುವಂತಹ ದೃಶ್ಯಗಳು ಸಾಮಾನ್ಯವಾಗಿವೆ, ಇದರಲ್ಲಿ ಬಹುತೇಕರಿಗೆ ಜನರಿಗೆ ಕೂಲಿ ಕಾಮರ್ಿಕರಿಗೂ ಸಹ ಅವರಿಗೇ ಆದಂತಹ ನಿದರ್ಿಷ್ಟ ಕಾನೂನುಗಳನ್ನು ರೂಪಿಸಲಾಗಿದೆ.
ಅದರಡಿಯಲ್ಲಿಯೇ ಅವರನ್ನು ನಾವು ದುಡಿಸಿಕೊಳ್ಳಬೇಕೆಂಬ ಮತ್ತು ಪರಿಪಾಲನೆ ಮಾಡಬೇಕೆಂಬ ಕನಿಷ್ಠ ಜ್ಞಾನವನ್ನು ಸಾರ್ವಜನಿಕರು ಹೊಂದದೇ ಇರುವುದು ದುರದೃಷ್ಟಕರ ಸಂಗತಿ ಎಂದರು.
8 ತಾಸಿಗಳಿಗೂ ಅಧಿಕ ವೇಳೆ ದುಡಿಸಿಕೊಳ್ಳುವಂತಿಲ್ಲ: ಕೂಲಿ ಕಾಮರ್ಿಕರನ್ನು ದಿನದಲ್ಲಿ 8 ತಾಸುಗಳಿಗೂ ಅಧಿಕ ಸಮಯ ದುಡಿಸಿಕೊಳ್ಳುವಂತಿಲ್ಲ ಒಂದುವೇಳೆ ಅವರ ಅವಶ್ಯಕತೆಯಿದ್ದಲ್ಲಿ ಕೂಲಿ ಕಾಮರ್ಿಕನ ಅನುಮತಿಯೊಂದಿಗೆ ಕೆಲಸಕ್ಕೆ ಕರೆದುಕೊಳ್ಳಬೇಕು ಮತ್ತು ಅದಕ್ಕೆ ಪ್ರತ್ಯೇಕವಾಗಿ ಕೂಲಿ ಹಣವನ್ನು (ಓವರ್ ಟೈಮ್) ನೀಡಬೇಕಾಗುತ್ತದೆ, ಆದರೆ ಇಂತಹ ನಿಯಮಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕಾಗುತ್ತದೆ ಎಂದರು.
ವಿಮೆ ರಹಿತ ಘಟಕಗಳೇ ಹೆಚ್ಚು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಕೂಲಿ ಕಾಮರ್ಿಕರೆಂದರೆ ನಮ್ಮ ಗುಲಾಮರೆಂದು ಭಾವಿಸುವುದು ಕಾನೂನಿಗೆ ವಿರುದ್ಧ ನಿಲುವು, ಅವರನ್ನೂ ಸಹ ನಮ್ಮ ಸಹದ್ಯೋಗಿ ಎಂಬ ಭಾವನೆಗಳೊಂದಿಗೆ ಪ್ರತಿಯೊಬ್ಬರೂ ಕಾಣಬೇಕು.
ಆದರೆ ಬಹುತೇಕ ಕಾಖರ್ಾನೆಗಳು ಕೋಲ್ಡ ಸ್ಟೋರೇಜ್ ಪೌಡರ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕೂಲಿ ಕಾಮರ್ಿಕರ ಸುರಕ್ಷತೆಗಾಗಿ ಜೀವವಿಮೆ ಮಾಡಿಸದೇ ಇರುವಂತಹ ಪ್ರಕರಣಗಳಿವೆ, ನಮ್ಮ ಕೆಲಸ ಮಾಡಿ ನಮಗೆ ಆದಾಯ ನೀಡುವಂತಹ ವ್ಯಕ್ತಿಗಳ ಜೀವದ ಸುರಕ್ಷತೆ ಕೂಡ ನಮ್ಮ ಜವಾಬ್ದಾರಿಯಾಗಿರಲಿ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಸಕರ್ಾರಿ ಅಭಿಯೋಜಕಿ ಸಿಂಧೂ ಪೋತದಾರ, ಪುರಸಭೆ ವ್ಯವಸ್ಥಾಪಕ ಎಲ್.ಶಂಕರ, ಆರೋಗ್ಯ ನೀರಿಕ್ಷಕ ರವಿಕೀತರ್ಿ, ನ್ಯಾಯವಾದಿಗಳಾದ ಎಂ.ಕೆ.ಕೋಡಿಹಳ್ಳಿ, ಸಿ.ಪಿ.ದೊಣ್ಣೇರ, ಭಾರತಿ ಕುಲಕಣರ್ಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.