ಲೋಕದರ್ಶನ ವರದಿ
ಮಾಂಜರಿ ದಿ 22: ವೃಧ್ದರಿಗೆ ಕೃತಕ ದಂತವನ್ನು ಒದಗಿಸಿ ದಂತಭಾಗ್ಯ ಯೋಜನೆಯು ರಾಜ್ಯದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ ಬಿಪಿಎಲ್ ಕಾರ್ಡ ಹೊಂದಿರುವ ಫಲಾನುಭವಿಗಳಿಗೆ ಹಲ್ಲು ಸೆಟನ್ನು ಉಚಿತವಾಗಿ ವಿತರಿಸುವುದು ಇದರ ಮೂಲ ಉದ್ದೇಶ ಎಂದು ಕೆಎಲ್ಇಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಸಾದ ರಾಂಪುರೆರವರು ಹೇಳಿದರು. ಅವರು ಚಿಕ್ಕೋಡಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕ್ಕೋಡಿ ಅಥಣಿ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಒಳಪಡುವ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಕೆಎಲ್ಇ ವಿಶ್ವನಾಥ ಕತ್ತಿದಂತ ಮಹಾವಿದ್ಯಾಲಯ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ದಂತ ಭಾಗ್ಯ ಫಲಾನುಭವಿಗಳಿಗೆ ದಂತ ಪಂಕ್ತಿ ವಿತರಣೆ ಮಾಡಿ ಮಾತನಾಡಿದರು.
ಈ ಶಿಬಿರದಲ್ಲಿ ಚಿಕ್ಕೋಡಿ ತಾಲ್ಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿಠ್ಠಲ ಶಿಂಧೆ, ಕೆಎಲ್ ಇ ಚಿಕ್ಕೋಡಿ ಆಸ್ಪತ್ರೆಯ ಆಡಳಿತಾಧಿಕಾರಿ ಶಿವಕುಮಾರ ಸಾಲಿಮಠ, ದಂತ ಮಹಾವಿದ್ಯಾಲಯದ ಕೃತಕ ದಂತ ವಿಭಾಗದ ಮುಖ್ಯಸ್ಥರಾದ ಡಾ.ಆನಂದಕುಮಾರ ಜಿ ಪಾಟೀಲ ರವರ ನೇತೃತ್ವದಲ್ಲಿ ಅವರ ಸಿಬ್ಬಂದಿ ವರ್ಗದವರಾದ ಡಾ.ರಮೇಶ ನಾಯ್ಕರ, ಡಾ.ಸ್ವಪನೀಲ ಶಂಕರಗೌಡಾ, ಡಾ.ಮಲ್ಲಿಕಾರ್ಜುನ ದೊಡ್ಡಮನಿ ಹಾಗೂ ಕೆಎಲ್ಇ ಚಿಕ್ಕೋಡಿ ದಂತ ವಿಭಾಗದ ಮುಖ್ಯಸ್ಥರಾದ ಡಾ.ಪುಷ್ಪಕ ಷಾ, ಡಾ. ದಿವ್ಯಾ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಮಹಾಂತೇಶ ಗುಡ್ನವರ, ಮಹಾಂತೇಶ ಇಂಚಲ, ಸ್ನಾತಕೋತರ ವಿದ್ಯಾರ್ಥಿಗಳು ಹಾಗೂ ದಂತ ತಂತ್ರಜ್ಞರು ಇನ್ನಿತರ ಸಿಬ್ಬಂದಿ ಉಪಸ್ಥಿತರಿದರು.