ಬಿಎಚ್ ಇಎಲ್, ಮೆಕಾನ್, ಎನ್ ಎಂಡಿಸಿಯಲ್ಲಿ ಬಂಡವಾಳ ಹಿಂತೆಗೆತಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ನವದೆಹಲಿ, ಜ 8 ಸಾರ್ವಜನಿಕ ವಲಯದ ಆರು ಉದ್ದಿಮೆ(ಪಿಎಸ್ ಯು)ಗಳಲ್ಲಿ ಈಕ್ವಿಟ ಪಾಲುದಾರಿಯ ಕಾರ್ಯತಂತ್ರ ಬಂಡವಾಳ ಹಿಂತೆಗೆತಕ್ಕೆ ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯ ಹಣಕಾಸು ವ್ಯವಹಾರಗಳ ಕುರಿತ ಸಚಿವ ಸಮತಿ ಇಂದು ಒಪ್ಪಿಗೆ ನೀಡಿದೆ. ಸಚಿವ ಸಂಪುಟ ಸಭೆ ನಂತರ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಮತ್ತು ಧರ್ಮೆಂದ್ರ ಪ್ರಧಾನ್ ಅವರು ಸುದ್ದಿಗಾರರಿಗೆ ಸಭೆಯ ತೀರ್ಮಾನಗಳನ್ನು ವಿವರಿಸಿದರು. ಖನಿಜ ಮತ್ತು ಲೋಹ ವಹಿವಾಟು ನಿಗಮ(ಎಂಎಂಟಿಸಿ)ಯಲ್ಲಿ ಶೇ 49.78, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(ಎನ್ ಎಂಡಿಸಿ)ದಲ್ಲಿ ಶೇ 10.10, ಮೆಕಾನ್ ನಲ್ಲಿ ಶೇ 0.68, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ (ಬಿಎಚ್ ಇಎಲ್)ನಲ್ಲಿ ಶೇ 0.68ರಷ್ಟು ಈಕ್ವಿಟಿ ಪಾಲುದಾರಿಕೆಯ ಕಾರ್ಯತಂತ್ರ ಬಂಡವಾಳ ಹಿಂತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಒಡಿಶಾ ರಾಜ್ಯ ಸರ್ಕಾರ ಇಪಿಕೊಲ್ ಮತ್ತು ಒಎಂಸಿ ಸಹ ಈ ಉದ್ದಿಮೆಗಳಲ್ಲಿ ಸೇರಿದ್ದು, ಇವುಗಳಲ್ಲಿ ಕ್ರಮವಾಗಿ ಶೇ 12 ಹಾಗೂ ಶೇ 20.47ರಷ್ಟು ಬಂಡವಾಳ ಹಿಂತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.