ಬೆಂಗಳೂರು, ಫೆ.15, ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಪೇಟೆ ನಿವಾಸಿ ರೋಷನ್ ಕುಮಾರ್ ಬಂಧಿತ ಆರೋಪಿ.ಬಂಧಿತನಿಂದ 67,500 ರೂ.ನಗದು ಹಾಗೂ 1 ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿ ಸಿಟಿ ಮಾರುಕಟ್ಟೆಯ ಕವಿತಾ ಮ್ಯಾಚಿಂಗ್ ಸೆಂಟರ್ ಅಂಗಡಿಯಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಶುಕ್ರವಾರ ರಾತ್ರಿ ಕಾರ್ಯಾಚರಣೆ ನಡೆಸಿ,ಆರೋಪಿಯನ್ನು ಬಂಧಿಸಿದ್ದಾರೆ.ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಟಿ 20 ಪಂದ್ಯದ ಫಲಿತಾಂಶದ ಕುರಿತು ಸಾರ್ವಜನಿಕರಿಂದ ಮೊಬೈಲ್ ಫೋನ್ ಮೂಲಕ ಹಣ ಹಾಕಿಸಿಕೊಂಡು ಜೂಜಾಡುತ್ತಿದ್ದ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.