ಬೆಂಗಳೂರು, ಏ.3, ಕಾರ್ಮಿಕ ಮುಖಂಡರ ಮೇಲೆ ಪೋಲಿಸ್ ಠಾಣೆಯಲ್ಲೆ ಹಲ್ಲೆ ನಡೆಸಿ ಅನುಚಿತವಾಗಿ ವರ್ತಿಸಿರುವ ಬೆಂಗಳೂರಿನ ಹಲಸೂರು ಠಾಣೆ ಇನ್ಸಪೆಕ್ಟರ್ ಶಿವಪ್ರಸಾದ್ ಮೇಲೆ ಕೂಡಲೆ ಕ್ರಮ ವಹಿಸಬೇಕೆಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ರಾಜ್ಯ ಸರಕಾರವನ್ನು ಆಗ್ರಹಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್. ಉಮೇಶ್ , ಕಾಮಿ೯ಕ ಇಲಾಖೆಯು ಹಮ್ಮಿಕೊಂಡಿರುವ ಕಾಮಿ೯ಕರಿಗೆ ಪರಿಹಾರವನ್ನು ಸಮ೯ಪಕವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕಾಮಿ೯ಕ ಇಲಾಖೆಯ ಕಾಯದಶಿ೯ಗಳು ಕೇಂದ್ರ ಕಾಮಿ೯ಕ ಸಂಘಟನೆಗಳ ಜೊತೆ ಸಭೆ ನಡೆಸಿ ಬೆಂಗಳೂರಿನ ಡಿಸಿಪಿ ವಲಯವಾರು ಕಾಮಿ೯ಕ ಸಂಘಟನೆಗೆ ಸಂಯೋಜನೆಯ ಜವಾಬ್ದಾರಿ ನೀಡಿ ಸಂಯೋಜಕರನ್ನು ಗುರುತಿಸಲಾಗಿದೆ. ಅದರಂತೆ ಮಾರ್ಚ್ 2ರಂದು ವಿವಿಧ ವಲಯದ ಕಾಮಿ೯ಕ ಸಂಘಟನೆಗಳು ಸಂತ್ರಸ್ತರ ಪಟ್ಟಿ ಮಾಡಿ ಮುಂದಿನ ಕ್ರಮ ಚರ್ಚೆ ಮಾಡಲು ವಲಯವಾರು ಸಭೆ ಕರೆಯಲಾಗಿತ್ತು ಎಂದು ತಿಳಿಸಿದ್ದಾರೆ.
ಪ್ರತಿ ವಲಯದ ಡಿಸಿಪಿ ಮತ್ತು ಬಿಬಿಎಂಪಿ ಜಂಟಿ ಆಯುಕ್ತರ ಜೊತೆಗೆ ಜವಾಬ್ದಾರಿ ನೀಡಲಾಗಿರುವ ಕಾಮಿ೯ಕ ಅಧಿಕಾರಿಗಳನ್ನು ಒಳಗೊಂಡು ಚಚಿ೯ಸಲು ಈ ಸಭೆ ಕರೆಯಲಾಗಿತ್ತು. ಈ ಪ್ರಯತ್ನದ ಭಾಗವಾಗಿ ಪೂವ೯ ವಲಯದ ಕಾಮಿ೯ಕ ಕಾಮಿ೯ಕ ಸಂಘಟನೆಗಳ ಸಂಯೋಜಕರಾದ ಎಐಸಿಸಿಟಿಯು ಅಪ್ಪಣ್ಣ ಜೊತೆ ಸಿಐಟಿಯು ರಾಜ್ಯ ನಾಯಕರಾದ ಎಚ್.ಎನ್.ಗೋಪಾಲಗೌಡ, ಎನ್.ಪ್ರತಾಪ್ ಸಿಂಹ ಹಾಗು ಕಾಮಿ೯ಕ ಅಧಿಕಾರಿ, ಹಲಸೂರು ಪೋಲಿಸ್ ಠಾಣೆಗೆ ಬೆಂಗಳೂರು ಪೂರ್ವ ವಲಯ ಡಿಸಿಪಿಯವರ ಸಮಯಾವಕಾಶ ಕೋರಿ ಅವರು ನೀಡಿದ ಸಮಯಕ್ಕೆ ಅವರನ್ನು ಭೇಟಿ ಮಾಡಲು ತೆರಳಿದ್ದರು. ಅಲ್ಲಿಯ ಠಾಣಾಧಿಕಾರಿಗಳಾದ ಶಿವಪ್ರಸಾದ್ ಅವರು ಕಾರ್ಮಿಕ ಅಧಿಕಾರಿಗಳನ್ನು ಮಾತನಾಡಲು ಬಿಡದೆ, ಡಿಸಿಪಿಯವರು ಠಾಣೆಗೆ ಬರುವ ಮುನ್ನ ಕಾರ್ಮಿಕ ಸಂಘಟನೆಗಳ ನಾಯಕರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಎರಡೇ ದಿನಗಳ ಹಿಂದೆ ನಗರದ ಪೋಲೀಸ್ ಕಮಿಷನರ್ ರವರ ತಮ್ಮ ಸಿಬ್ಬಂದಿ ಸಾರ್ವಜನಿಕರ ಜೊತೆ ಸೌಜನ್ಯ ದಿಂದ ವರ್ತಿಸಬೇಕು ಎಂದು ಹದಿನಾಲ್ಕು ಅಂಶಗಳುಳ್ಳ ಅಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರವಾಗಿದೆ. ಸಾರ್ವಜನಿಕರಿರಲಿ, ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಸರಕಾರದ ಜೊತೆ ಕೆಲಸ ಮಾಡಲು ಮುಂದಾದ ರಾಜ್ಯ ಮಟ್ಟದ ಕಾರ್ಮಿಕ ನಾಯಕರ ಜೊತೆ ಇನ್ಸ್‌ಪೆಕ್ಟರ್ ಶಿವಪ್ರಸಾದ್ ಹೀನಾಯವಾಗಿ ನೆಡೆದುಕೊಂಡಿದ್ದಾರೆ. ಇಂತಹ ನಡೆ ಅಕ್ಷಮ್ಯ ಎಂದು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿ ಖಂಡಿಸುತ್ತದೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಸಿಪಿಐಎಂ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್. ಉಮೇಶ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.