ಸಿ.ಎಂ ನಿಧರ್ಾರ ಶ್ಲಾಘನೀಯ

ಲೋಕದರ್ಶನ ವರದಿ

ಬೆಳಗಾವಿ20: ಉತ್ತರ ಕನರ್ಾಟಕದ ಶಕ್ತಿ ಸೌಧಕ್ಕೆ ಪ್ರಮುಖ 9 ಸರಕಾರಿ ಕಚೇರಿಯನ್ನು ಸ್ಥಳಾಂತರ ಮಾಡುವುದಾಗಿ ಘೋಷಣೆ ಮಾಡಿರುವ ಸಿಎಂ ಕುಮಾರಸ್ವಾಮಿ ಅವರ ಕಾರ್ಯ ಶ್ಲಾಘನೀಯ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಉತ್ತರ ಕನರ್ಾಟಕ ಭಾಗದ ಜನರ ಸಮಸ್ಯೆ ಸಾಕಷ್ಟಿವೆ. ಅವುಗಳನ್ನು ಹೋತ್ತು ಬೆಂಗಳೂರಿನ ವಿಧಾನಸೌಧಕ್ಕೆ ಪರದಾಡುವ ಪರಿಸ್ಥಿತಿ ನಿಮರ್ಾಣವಾಗಿತ್ತು.

  ಈ ಭಾಗದ ವಿವಿಧ ಮಠಾಧೀಶರು ಹೋರಾಟ ನಡೆಸಿ ಪ್ರತಿಪಕ್ಣದ ನಾಯಕ ಬಿ.ಎಸ್.ಯಡಿಯೂರಪ್ಪ ನವರ ಮೂಲಕ ಸರಕಾರಕ್ಕೆ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. 

  ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿಯೇ ಸಿಎಂ ಕುಮಾರಸ್ವಾಮಿ ಅವರು ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಸರಕಾರಿ ಕಚೇರಿಯನ್ನು ಸ್ಥಳಾಂತರ ಮಾಡುವಂತೆ ಹತ್ತು ದಿನಗಳ ಕಾಲ ಸರಕಾರಕ್ಕೆ ಗಡವು ನೀಡಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಿಎಂ ಕುಮಾರಸ್ವಾಮಿ, ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಹಾಗೂ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಉತ್ತರ ಕನರ್ಾಟಕದ ಜನತೆ ಹಾಗೂ ಈ ಭಾಗದ ಮಠಾಧೀಶರ ಪರವಾಗಿ ಅಭಿನಂದನೆಗಳನ್ನು ಶ್ರೀಗಳು ತಿಳಿಸಿದ್ದಾರೆ.