ಸೋನಿಯಾ ಸಭೆ ಬಹಿಷ್ಕರಿಸಿದ ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತಾ, ಜ 9      ಭಾರತ್ ಬಂದ್ ವೇಳೆ ಎಡಪಕ್ಷಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಡೆಸಿರುವ ಹಿಂಸಾಚಾರದಿಂದ ತೀವ್ರ ಅಸಮಾಧಾನಗೊಂಡಿರುವ   ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೆ  13ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯುವ ವಿಪಕ್ಷ ನಾಯಕರ  ಸಭೆ ಬಹಿಷ್ಕರಿಸಿದ್ದಾರೆ  

ಕೇಂದ್ರ ಕಾರ್ಮಿಕ ಸಂಘಟನೆಗಳು ಬುಧವಾರ ರಾಷ್ಟ್ರವ್ಯಾಪಿ ಕರೆ ನೀಡಿದ್ದ 24 ಗಂಟೆಗಳ ಮುಷ್ಕರದ ವೇಳೆ ಪಶ್ಚಿಮಬಂಗಾಳದಲ್ಲಿ ಹಿಂಸಾಚಾರ ಘಟನೆಗಳು ನಡೆದಿದ್ದು, ರೈಲು ತಡೆ ಮಾಡಿ , ರಸ್ತೆಗಳಲ್ಲಿ ಟಯರ್ಗಳನ್ನು ಸುಟ್ಟು ಹಾಕಿ ಬಲವಂತದ ಬಂದ್ ಮಾಡಿಸಲಾಗಿತ್ತು .

'ಇದೆ 31 ರಂದು ದೆಹಲಿಯಲ್ಲಿ ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ  ನಡೆಯುವ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇನೆ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.  

ಎಡಪಕ್ಷಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದಲ್ಲಿ ನಡೆಸಿದ ಹಿಂಸಾಚಾರಕ್ಕೆ ನನ್ನ  ಸಹಮತವಿರಲಿಲ್ಲ  ಎಂದೂ  ಅವರು ವಿಧಾನಸಭೆಯಲ್ಲಿ ಹೇಳಿದರು.  

ಪೌರತ್ವ ತಿದ್ದುಪಡಿ ಕಾಯ್ದೆ 2019ಕ್ಕೆ ಸಂಬಂಧಿಸಿ ದೇಶದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಯ ವೇಳೆ ವಿಶ್ವವಿದ್ಯಾಲಯದ ಕ್ಯಾಂಪಸ್ ಗಳಲ್ಲಿ  ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿ ಚರ್ಚೆ ನಡೆಸಲು ಎಡ ಪಕ್ಷಗಳು ಸೇರಿದಂತೆ ಎಲ್ಲ ವಿಪಕ್ಷಗಳ ಸಭೆಯನ್ನು ಸೋನಿಯಾ ಗಾಂಧಿ ಕರೆದಿದ್ದಾರೆ 

ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ವಿದ್ಯಾರ್ಥಿಗಳ ಚಳುವಳಿ  ಮುನ್ನಡೆಸಲು ಹಾಗೂ ಅದಕ್ಕೆ ಬೆಂಬಲ ನೀಡಲು ಚಿಂತಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.