ಟಿ-20: ಶ್ರೀಲಂಕಾ ವಿರುದ್ಧ ವಿಂಡೀಸ್ ಕ್ಲೀನ್ ಸ್ವೀಪ್ ಸಾಧನೆ

ಪಳ್ಳಿಕೆಲೆ, ಮಾ.7, ಸ್ಟಾರ್ ಆಟಗಾರ ಶಿಮ್ರಾನ್ ಹೆಟ್ಮಿಯರ್ (ಅಜೇಯ 43) ಮತ್ತು ಆಂಡ್ರೆ ರಸ್ಸೆಲ್ (ಅಜೇಯ 40) ಅವರ ಭರ್ಜರಿ ಆಟದ ನೆರವಿನಿಂದ ವೆಸ್ಟ್ ಇಂಡೀಸ್ ಶುಕ್ರವಾರ ನಡೆದ ಎರಡನೇ ಮತ್ತು ಅಂತಿಮ ಟಿ-20 ಪಂದ್ಯದಲ್ಲಿ ಶ್ರೀಲಂಕಾವನ್ನು ಏಳು ವಿಕೆಟ್ಗಳಿಂದ ಮಣಿಸಿ ಚುಟುಕು ಸರಣಿಯನ್ನು 2–0 ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.   ಟಾಸ್ ಸೋತರೂ, ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿತು. ಆತಿಥೇಯ ತಂಡ ಪರ ದಾಸುನ್ ಶಾನಕಾ 24 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ ಅಜೇಯ 31 ರನ್ ಗಳಿಸಿದರು. ಇವರ ಉತ್ತಮ ಆಟದ ಫಲವಾಗಿ ಲಂಕಾ 20 ಓವರ್ಗಳಲ್ಲಿ ಆರು ವಿಕೆಟ್ಗೆ 155 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ತಂಡವು 17 ಓವರ್ಗಳಲ್ಲಿ ಮೂರು ವಿಕೆಟ್ಗಳಿಗೆ 158 ರನ್ ಗಳಿಸಿ ಪಂದ್ಯ ಗೆದ್ದುಕೊಂಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಸೆಲ್ ಅವರಿಗೆ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.   ಶ್ರೀಲಂಕಾ ಪರ ಶಾನಕಾ ಅತಿ ಹೆಚ್ಚು ರನ್ ಗಳಿಸಿದರು. ಉಳಿದಂತೆ ತಿಸರಾ ಪೆರೆರಾ 13 ಎಸೆತಗಳಲ್ಲಿ ನಾಲ್ಕು ಮತ್ತು ಒಂದು ಸಿಕ್ಸರ್ ಸಹಾಯದಿಂದ ಅಜೇಯ 21 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ಫ್ಯಾಬಿಯಾನ್ ಅಲೆನ್ ಎರಡು ವಿಕೆಟ್ ಪಡೆದರೆ, ಶೆಲ್ಡನ್ ಕಾಟ್ರೆಲ್, ಓಶೇನ್ ಥಾಮಸ್ ಮತ್ತು ಡ್ವೇನ್ ಬ್ರಾವೋ ತಲಾ ಒಂದು ವಿಕೆಟ್ ಪಡೆದರು. ವಿಂಡೀಸ್ನ ಇನ್ನಿಂಗ್ಸ್ನಲ್ಲಿ ಬ್ರೆಂಡನ್ ಕಿಂಗ್ 21 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್ಗಳೊಂದಿಗೆ 43 ರನ್ ಗಳಿಸಿದರು, ಹೆಟ್ಮಿಯರ್ ಅಜೇಯ 43 ಮತ್ತು ರಸೆಲ್ ಅಜೇಯ 40 ಬಾರಿಸಿದರು. ಶ್ರೀಲಂಕಾ ಪರ ಏಂಜೆಲೊ ಮ್ಯಾಥ್ಯೂಸ್, ಲಹಿರು ಕುಮಾರ, ಮತ್ತು ಶಾನಕಾ ತಲಾ ಒಂದು ವಿಕೆಟ್ ಪಡೆದರು.