ಕ್ರಿಸ್ ಮಸ್: ರಾಷ್ಟ್ರಪತಿ, ಉಪ ರಾಷ್ಟ್ರಪತಿ ಶುಭ ಹಾರೈಕೆ

ನವದೆಹಲಿ, ಡಿ 25,ಕ್ರಿಸ್ ಮಸ್ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು  ದೇಶದ ಜನತೆಗೆ ಶುಭ ಕೋರಿದ್ದಾರೆ.  ರಾಮನಾಥ್ ಕೋವಿಂದ್ ತಮ್ಮ ಸಂದೇಶದಲ್ಲಿ ಏಸುಕ್ರಿಸ್ತನ ಜೀವನ  ಮಾನವೀಯತೆಗೆ ಸ್ಪೂರ್ತಿಯಾಗಿದ್ದು, ಪ್ರೀತಿ, ಸಹಾನುಭೂತಿ ಮತ್ತು ಭ್ರಾತೃತ್ವ ಅವರ ಸಂದೇಶಗಳಲ್ಲಿವೆ ಎಂದಿದ್ದಾರೆ.  ಈಗಿನ ದ್ವೇಷ ಪೂರಿತ ಮನಸ್ಥಿತಿ, ಹಿಂಸಾಚಾರದ ಸಂದರ್ಭದಲ್ಲಿ ಕ್ರಿಸ್ತನ ಸಂದೇಶಗಳು ಗಾಯವನ್ನು ವಾಸಿ ಮಾಡುವ  ಶಕ್ತಿ ಹೊಂದಿವೆ.  ಎಲ್ಲರನ್ನೂ ಪ್ರೀತಿಸುವ ಮನಸ್ಥಿತಿಯನ್ನು ನಿರ್ಮಿಸಲಿದ್ದು, ಎಲ್ಲರೂ ಕ್ರಿಸ್ತನ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ  ಕರೆ ನೀಡಿದರು.  ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು,  ಕ್ರಿಸ್ತನ ಬದುಕು ಸತ್ಯ, ಪ್ರೀತಿ, ವಿಶ್ವಾಸವನ್ನು ಹೊಂದಿದ್ದು, ಜನತೆ ಕ್ರಿಸ್ತನ ಮೌಲ್ಯಗಳನ್ನು ಪಾಲಿಸುವಂತೆ ಕರೆ ನೀಡಿದ್ದಾರೆ.  ಶಾಂತಿ, ಸಹಿಷ್ಣುತೆ ಹಾಗೂ ಕೋಮು ಸೌಹಾರ್ದತೆ ಕಾಪಾಡುವ ಆಧಾರ ಸ್ತಂಭಗಳನ್ನು ಆಶಯಿಸಿದರೆ ಬಲಿಷ್ಠ ಜಗತ್ತನ್ನು ನಿರ್ಮಿಸಬಹುದು ಎಂದು ಹೇಳಿದ್ದಾರೆ.