ಜುಲೈ 30, 31ರಂದು ಸಿಇಟಿ ಪರೀಕ್ಷೆ; ದ್ವಿತೀಯ ಪಿಯು ಪರೀಕ್ಷೆಗೆ ಶೀಘ್ರ ವೇಳಾಪಟ್ಟಿ ಪ್ರಕಟ: ಡಿಸಿಎಂ

ಬೆಂಗಳೂರು, ಮೇ 13,ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ಮುಂದೂಡಲ್ಪಟ್ಟ ದ್ವಿತೀಯ ಪಿಯುಸಿಯ ಇಂಗ್ಲಿಷ್ ಪತ್ರಿಕೆಯ ಪರೀಕ್ಷಾ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು. ರಾಜ್ಯದ ಪದವಿ ಕಾಲೇಜುಗಳು ಸೆಪ್ಟಂಬರ್ ಮೊದಲ ವಾರದಲ್ಲಿ ಆರಂಭಗೊಳ್ಳಲಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎಸ್ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಇಟಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಬೇತಿ ನೀಡಲಾಗುತ್ತಿದೆ. ಏಪ್ರಿಲ್ 25 ರಂದು ಅಧಿಕೃತವಾಗಿ ತರಬೇತಿಗೆ ಚಾಲನೆ ನೀಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.
ಸಿಇಟಿ 2020 ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಲಾಕ್ ಡೌನ್ ನಿಂದ  ಮುಂದೂಡಲ್ಪಟ್ಟಿದ್ದಂತ ಕಾಮನ್ ಎಂಟರೆನ್ಸ್ ಟೆಸ್ಟ್(ಸಿಇಟಿ) ಪರೀಕ್ಷಾ ದಿನಾಂಕ ಕೊನೆಗೂ  ನಿಗದಿಪಡಿಸಲಾಗಿದೆ. ಲಾಕ್ ಡೌನ್ ನಿಂದ ಮುಂದೂಡಲ್ಪಟ್ಟ ಸಿಇಟಿ ಪರೀಕ್ಷೆಯನ್ನು,  ಜುಲೈ 30 ಮತ್ತು ಜುಲೈ 31ಕ್ಕೆ ನಡೆಸಲಾಗುತ್ತದೆ ಎಂದು ಪ್ರಕಟಿಸಿದರು.
 ಲಾಕ್ ಡೌನ್ ನಿಂದಾಗಿ ಸಿಇಟಿ ಪರೀಕ್ಷೆ  ದಿನಾಂಕವನ್ನು ಮುಂದೂಡಲಾಗಿತ್ತು. ಇಂತಹ ಪರೀಕ್ಷೆಗಾಗಿ ಮತ್ತೆ ಅರ್ಜಿ ಸಲ್ಲಿಸಲು ಮೇ  8ರಿಂದ 18ರ ವರೆಗೆ ಅವಕಾಶ ಕೂಡ ನೀಡಲಾಗಿತ್ತು. ಇದೀಗ ವಿದ್ಯಾರ್ಥಿಗಳಿಗೆ ಅನುಕೂಲವಾಗುವ  ನಿಟ್ಟಿನಲ್ಲಿ ಸಿಟಿಟಿ ಪರೀಕ್ಷಾ ದಿನಾಂಕವನ್ನು ಜುಲೈ 30, 31ಕ್ಕೆ ನಿಗದಿಪಡಿಸಲಾಗಿದೆ  ಎಂಬುದಾಗಿ ತಿಳಿಸಿದ್ದಾರೆ.GETCET Go  ಎಂಬ ಹೆಸರಿನಲ್ಲಿ ಆನ್ ಲೈನ್ ತರಬೇತಿ ನಡೆಯುತ್ತಿದೆ.  ದೊಡ್ಡ ಸಂಖ್ಯೆಯಲ್ಲಿ ತರಬೇತಿ ಪಡೆಯಲು ವಿದ್ಯಾರ್ಥಿಗಳು ಮುಂದೆ ಬಂದಿದ್ದಾರೆ. ನಮ್ಮ ನಿರೀಕ್ಷೆ ಮೀರಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.ಜುಲೈ 30 ಮತ್ತು 31ರಂದು ಸಿಇಟಿ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ಬಾಕಿ ಇರುವ ಒಂದು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬೇಗ ಮುಗಿಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಘೋಷಣೆ ಮಾಡಲಿದೆ ಎಂದು ಹೇಳಿದರು.
ಸಿಇಟಿ, ನೀಟ್ ಗೆ ಅನುಕೂಲವಾಗುವ ವಿಡಿಯೋ, ಟೆಸ್ಟ್,  ಪಠ್ಯಗಳ ವಿವರ ಈ ಕೋರ್ಸ್ ನಲ್ಲಿ ಇರಲಿದೆ. ಈಗಾಗಲೇ ಕೋರ್ಸ್ ಪ್ರಾರಂಭವಾಗಿದೆ. 1,60,510 ಜನ ಈಗಾಗಲೇ ಈ ಪೇಜ್ ವೀಕ್ಷಿಸಿದ್ದು, 76913 ವಿದ್ಯಾರ್ಥಿಗಳು ಲಾಗಿನ್ ಆಗಿದ್ದಾರೆ. 38 ಸಾವಿರ ವಿದ್ಯಾರ್ಥಿಗಳು ಆಪ್ ಮೂಲಕ ಲಾಗಿನ್ ಆಗಿದ್ದಾರೆ.  38 ಸಾವಿರ ವಿದ್ಯಾರ್ಥಿಗಳು ವೆಬ್ ಪೋರ್ಟಲ್ ಮೂಲಕ ಲಾಗಿನ್ ಆಗಿದ್ದಾರೆ. 51,975 ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಸಹಾಯವಾಣಿಯನ್ನು ಕೂಡಾ ಪ್ರಾರಂಭ ಮಾಡಲಾಗಿದೆ ಎಂದು  ಅಶ್ವಥ್ ನಾರಾಯಣ ಹೇಳಿದರು.
ಡಿಗ್ರಿ ಕಾಲೇಜ್ ಎಂಜಿನಿಯರಿಂಗ್ ಕಾಲೇಜು ಪಾಠ ಮೇ 31 ಒಳಗೆ ಮುಗಿಸಲು ಸೂಚನೆ ನೀಡಲಾಗಿದೆ. ಆನ್ ಲೈನ್ ಮೂಲಕ ಪಾಠ ಮುಗಿಸಲು ಸೂಚನೆ ನೀಡಲಾಗಿದ್ದು, ನಂತರ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.
ಡಿಗ್ರಿ ಕಾಲೇಜ್ ಗಳು ಈ ವರ್ಷ ಸೆಪ್ಟೆಂಬರ್ ಮೊದಲ ವಾರದಿಂದ ಆರಂಭ ಆಗುತ್ತದೆ.  ಪರೀಕ್ಷೆಗಳು, ಫಲಿತಾಂಶಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ.  ಸಿಇಟಿ‌ ಪರೀಕ್ಷೆಗೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಕಡ್ಡಾಯವಾಗಿ ಇರುತ್ತದೆ. ಕೊಠಡಿಯಲ್ಲಿ ಕಡಿಮೆ ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತದೆ. ಈ ಬಾರಿ ಪರೀಕ್ಷಾ ಕೇಂದ್ರಗಳು ಹೆಚ್ಚಾಗಲಿವೆ.  ಮುಂಜಾಗ್ರತಾ ಕ್ರಮದೊಂದಿಗೆ ಸಿಇಟಿ ಪರೀಕ್ಷೆ ನಡೆಯುತ್ತದೆ.  ದಿನಂತೆ ಆಫ್ ಲೈನ್ ನಲ್ಲಿ ಸಿಇಟಿ ಪರೀಕ್ಷೆ ನಡೆಯುತ್ತದೆ ಎಂದು ಹೇಳಿದರು.ಮೆಡಿಕಲ್ ಸೀಟ್ ಬ್ಲಾಕಿಂಗ್ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಈಗಾಗಲೇ ಕಮಿಟಿ ರಚನೆ ಮಾಡಿ ವರದಿ ನೀಡಿದೆ. ವರದಿ ಏನಿದೆ ಎಂದು ಈಗೀನ ಸಚಿವರು ನೋಡಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.ಎಂಜಿನಿಯರಿಂಗ್ ಸೀಟ್ ಶುಲ್ಕ ಹೆಚ್ಚಳಕ್ಕೆ ಮನವಿ ಬಂದಿದೆ. ಈ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಳದ ಬಗ್ಗೆ ವೈಜ್ಞಾನಿಕ ದೃಷ್ಟಿಯಿಂದ ಚಿಂತನೆ ಮಾಡಿ ನಿರ್ಧಾರ ಮಾಡಲಾಗುವುದು ಎಂದು ಅಶ್ವಥ್ ನಾರಾಯಣ ಹೇಳಿದರು.