ಹಾವೇರಿ:ಎ. 03: ಶಿಗ್ಗಾಂವ ಸಮಾಜ ಕಲ್ಯಾಣ ಇಲಾಖೆ ಬಾಲಕಿಯ ವಸತಿ ನಿಲಯದಲ್ಲಿ ಸ್ಥಾಪಿಸಿರುವ ವಲಸೆ ಕಾಮರ್ಿಕರ ತಾತ್ಕಾಲಿಕ ಪುನರ್ ವಸತಿ ಕೇಂದ್ರ ಹಾಗೂ ಜೆಕಿನಕಟ್ಟಿ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ವಲಸೆ ಕಾಮರ್ಿಕರ ಶಿಬಿರಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ ಅವರು ಪರಿಶೀಲನೆ ನಡೆಸಿದರು.
ಶುಕ್ರವಾರ ಶಿಗ್ಗಾಂವಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಆಶ್ರಯ ಪಡೆದಿರುವ ರಾಜಸ್ತಾನ ಮೂಲಕ 62 ಜನ ವಲಸೆ ಕಾಮರ್ಿಕರ ಆರೋಗ್ಯ ಹಾಗೂ ವಸತಿ ಮತ್ತು ಊಟೋಪಚಾರದ ಬಗ್ಗೆ ಪರಿಶೀಲನೆ ನಡೆಸಿ, ಹಾಗೂ ಕಾಮರ್ಿಕರು ಜೊತೆಗೆ ಸಂವಾದ ನಡೆಸಿ ಆತ್ಮಸ್ಥೈರ್ಯ ತುಂಬಿದರು.
ಕಾಮರ್ಿಕರಿಗೆ ಊಟ, ವಸತಿಯ ಯಾವುದೇ ರೀತಿಯ ತೊಂದರೆಯಾಗಂತೆ ಕ್ರಮವಹಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಆರೋಗ್ಯ ಹಾಗೂ ಶುಚಿತ್ವದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡಿದರು. ಮಾನಸಿಕವಾಗಿ ಕುಂದದಂತೆ ಆತ್ಮಸ್ಥೈರ್ಯ ತುಂಬಿಸಿದರು.
ಜಕ್ಕನಕಟ್ಟಿಯ ಮೂರಾಜರ್ಿ ವಸತಿ ಶಾಲೆಯಲ್ಲಿ ತೆರೆಯಲಾದ ಕ್ವಾರಂಟೈನ ಆಸ್ಪತ್ರೆಗೆ ಭೇಟಿ ನೀಡಿ, ಸಕರ್ಾರಿ ಗೃಹಪ್ರತ್ಯೇಕತೆಯಲ್ಲಿರುವ ವ್ಯಕ್ತಿಗಳೊಂದಿಗೆ ಚಚರ್ಿಸಿದರು. ಉಸ್ತುವಾರಿ ಆರೋಗ್ಯಾಧಿಕಾರಿಗಳ ಜೊತೆ ಕ್ವಾರೆಂಟನದಲ್ಲಿರುವ ವ್ಯಕ್ತಿಗಳ ಆರೋಗ್ಯ ಹಾಗೂ ಊಟ, ವಸತಿ ಹಾಗೂ ಕೈಗೊಳ್ಳಬೇಕಾದ ಮುನ್ನೇಚರಿಕೆ ಬಗ್ಗೆ ಮಾಹಿತಿ ಪಡೆದರು. ಅಗತ್ಯ ಸೌಲಭ್ಯಗಳನ್ನು ಒದಗಸಲು ತಹಶೀಲ್ದಾರರಿಗೆ ನಿದರ್ೇಶನ ನೀಡಿದರು.
ತಾಲೂಕು ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಪ್ರಶಾಂತ ಎಮ್. ತುರಕಾಣಿ, ತಹಶೀಲ್ದಾರ, ಪ್ರಕಾಶ ಕುದರಿ, ತಹಶೀಲ್ದಾರ, ಸಹಾಯಕ ನಿದರ್ೆಶಕ ಅಶೋಕ ಕುಂಬಾರ, ವಸತಿ ನಿಲಯದ ಸಿಬ್ಬಂದಿಗಳು ಹಾಜರಿದ್ದರು.