ಬೆಂಗಳೂರು, ನ 28- ಕರ್ನಾಟಕ ಪ್ರೀಮಿಯರ್ ಲೀಗ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಕರ್ನಾಟಕದ ಸ್ಟಾರ್ ಆಟಗಾರರು ದಿನದಿಂದ ದಿನಕ್ಕೆೆ ಸಿಕ್ಕಿ ಬೀಳುತ್ತಿದ್ದಾರೆ. ಇದೀಗ ಕರ್ನಾಟಕ ತಂಡದ ಮಾಜಿ ನಾಯಕ ವಿನಯ್‌ಕುಮಾರ್ ಅವರಿಗೆ ಈ ಪ್ರಕರಣ ಸಂಬಂಧ ಸಿಬಿಐ ನೋಟೀಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ಖಡಕ್ ಎಚ್ಚರಿಕೆ ನೀಡಿದೆ.
ಇತ್ತೀಚೆಗಷ್ಟೆೆ ಕರ್ನಾಟಕದ ಹಿರಿಯ ವೇಗಿ ಅಭಿಮನ್ಯು ಮಿಥುನ್ ಅವರಿಗೆ ಇದೇ ಪ್ರಕರಣ ಸಂಬಂಧ ಸಿಬಿಐ ನೋಟೀಸ್ ಜಾರಿ ಮಾಡಿತ್ತು. ವಿನಯ್ ಕುಮಾರ್ ಪ್ರಸಕ್ತ ಆವೃತ್ತಿಯ ಕೆಪಿಎಲ್ ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮುನ್ನಡೆಸಿದ್ದರು. ವೇಗದ ಬೌಲಿಂಗ್‌ನಿಂದ ಹೆಸರು ಮಾಡಿದ್ದ ಅವರಿಗೆ ಬುಕ್ಕಿಗಳು ಸಂಪರ್ಕಿಸಿದ್ದರಾ ಎಂಬ ಅನುಮಾನ ಮೂಡಿದ ಹಿನ್ನೆೆಲೆಯಲ್ಲಿ ದಾವಣಗೆರೆ ಎಕ್‌ಸ್‌ಪ್ರೆೆಸ್‌ಗೆ ಸಿಬಿಐ ನೋಟೀಸ್ ಜಾರಿ ಮಾಡಿದೆ.
ಭಾರತ, ಭಾರತ ‘ಎ’, ಐಪಿಎಲ್‌ನಲ್ಲಿ ಆರ್‌ಸಿಬಿ, ಕೆಕೆಆರ್ ತಂಡವನ್ನು ವಿನಯ್ ಕುಮಾರ್ ಪ್ರತಿನಿಧಿಸಿದ್ದರು. ಪ್ರಸ್ತುತ ಆವೃತ್ತಿಯಲ್ಲಿ ಪುದುಚೇರಿ ತಂಡದ ಪರ ಆಡುತ್ತಿದ್ದಾರೆ. ಭಾರತ ತಂಡದ ಪರ 31 ಏಕದಿನ ಹಾಗೂ 9 ಟಿ-20 ಪಂದ್ಯಗಳಾಡಿದ್ದು, ಕ್ರಮವಾಗಿ 38 ಹಾಗೂ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜತೆಗೆ, ಟೀಮ್ ಇಂಡಿಯಾ ಪರ ಒಂದೇ-ಒಂದು ಟೆಸ್ಟ್ ಪಂದ್ಯವಾಡಿದ್ದು ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಸ್ಫಕ್ ಅಲಿ ಹಾಗೂ ಕರ್ನಾಟಕದ ಆಟಗಾರರಾದ ಕೆ.ಎಂ.ಗೌತಮ್ ಹಾಗೂ ಅಬ್ರಾರ್ ಖಾಜಿ ಅವರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಈ ಪ್ರಕರಣಗಳಲ್ಲಿ ಎಂಥ ಪ್ರಭಾವಿಗಳು ಭಾಗಿಯಾಗಿದ್ದರೂ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.