ಹ್ಯಾಮಿಲ್ಟನ್, ಫೆ.15 : ನ್ಯೂಜಿಲೆಂಡ್ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾರತದ ಮುನ್ನಡೆಗೆ ಕಾರಣರಾದ ಮೊಹಮ್ಮದ್ ಶಮಿ, ವಾತಾವರಣದ ಲಾಭ ಪಡೆದಿದ್ದಾಗಿ ತಿಳಿಸಿದ್ದಾರೆ.
“ಮೊದಲ ದಿನದಂತೆ ಎರಡನೇ ದಿನವೂ ಬೌಲರ್ ಗಳಿಗೆ ಪಿಚ್ ಸಹಾಯಕವಾಗಿತ್ತು. ಈ ಸವಾಲನ್ನು ಸಮರ್ಥವಾಗಿ ಎದುರಿಸುವ ನಿರ್ಧಾರವನ್ನು ಮಾಡಿದ್ದೇವೆ. ಮೊದಲ ದಿನಕ್ಕೆ ಹೋಲಿಸದರೆ, ಎರಡನೇ ದಿನ, ಮೊದಲ ದಿನದಷ್ಟು ನೆರವು ಪಿಚ್ ಬೌಲರ್ ಗಳಿಗೆ ನೀಡಲಿಲ್ಲ. ವಾತವಾರಣದ ಲಾಭ ಪಡೆದು ಬೌಲಿಂಗ್ ಮಾಡಿದ್ದೇನೆ” ಎಂದು ಶಮಿ ತಿಳಿಸಿದ್ದಾರೆ.
“ಪಿಚ್ ನಲ್ಲಿ ಬೌನ್ಸ್ ಇತ್ತು. ಪರಿಣಾಮ ಬಿಗುವಿನ ದಾಳಿ ನಡೆಸಲು ಸಹಾಯಕವಾಯಿತು. ವಿಶಿಷ್ಟ ಸಾಧನೆಗೆ ಶ್ರದ್ಧೆ ಮುಖ್ಯ. ದರ ಸಹಾಯದಿಂದಲೇ ಉತ್ತಮ ಬೌಲಿಂಗ್ ತಂತ್ರಗಾರಿಕಗೆ ಮೈಗೂಡಿಸಿಕೊಳ್ಳಲು ಸಹಾಯಕವಾಯಿತು. ಸೀಮ್ ನನ್ನ ಕೈಹಿಡಿದಿದ್ದು ಸಹಾಯಕವಾಯಿತು. ಗುರಿಯನ್ನು ಹಿಂಬಾಲಿಸಲು ಶ್ರದ್ಧೆ ಹಾಗೂ ಭಕ್ತಿ ಬಹಳ ಮುಖ್ಯ” ಎಂದಿದ್ದಾರೆ.
ಇದೇ ವೇಳೆ ಜಸ್ಪ್ರಿತ್ ಬುಮ್ರಾ ಗಾಯದ ಬಳಿಕ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, “ಬುಮ್ರಾ ಅವರು ಈ ಹಿಂದೆ ನೀಡಿದ ಪ್ರದರ್ಶನ ನೆನಪು ಹಾರಿತೆ. ಒಂದೆರೆಡು ಪಂದ್ಯಗಳಲ್ಲಿ ಪ್ರದರ್ಶನ ನೀಡದೆ ಇದ್ದುದ್ದರಿಂದ ಅವರ ವಿರುದ್ಧ ಮಾತನಾಡುವುದು ತಪ್ಪು, ಬುಮ್ರಾ ಅವರಲ್ಲಿ ಪ್ರತಿಭೆ ಇದ್ದು ಪುಟಿದೇಳ ಬಲ್ಲರು. ಅವರಿಗೆ ನಮ್ಮೆಲ್ಲರ ಬೆಂಬಲ ಬೇಕು” ಎಂದು ಶಮಿ ತಿಳಿಸಿದ್ದಾರೆ.