ಸಿಎಎ ಪೌರತ್ವ ನೀಡುತ್ತದೆಯೇ ಹೊರತು ಕಸಿದುಕೊಳ್ಳುವುದಿಲ್ಲ: ನಿರ್ಮಲಾ ಸೀತಾರಾಮನ್

ಚೆನ್ನೈ, ಜ. 19 :    ಪೌರತ್ವ ತಿದ್ದುಪಡಿ ಕಾಯ್ದೆ, ಪೌರತ್ವವನ್ನು ನೀಡುತ್ತದೆಯೇ ಹೊರತು ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ ಎಂದು ಬಿಜೆಪಿ ಮುಖಂಡೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

 ಪೌರತ್ವದಿಂದ ವಂಚಿತರಾಗುತ್ತೇವೆ ಎಂಬ ಆತಂಕವಿರುವವರೊಂದಿಗೆ ಮಾತುಕತೆ ನಡೆಸಲು ಸಕರ್ಾರ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.

ಚೆನ್ನೈ ಸಿಟಿಜನ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಎ ಕುರಿತು ಮಾತನಾಡಿದ ಅವರು, ಸಿಎಎಯನ್ನು ವಿರೋಧಿಸುವವರು ಸುಳ್ಳನ್ನು ಹರಡುವ ಮೂಲಕ ಜನರಲ್ಲಿ ಗೊಂದಲ ಮೂಡಿಸಿದ್ದಾರೆ. ಸಿಎಎಯಿಂದ ಯಾವ ಮುಸ್ಲಿಮರಿಗೂ ತೊಂದರೆಯಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ಸಿಎಎ ಮುಸ್ಲಿಮರ ವಿರೋಧಿಯಲ್ಲ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

ಸಿಎಎ ಜನರಿಗೆ ಉತ್ತಮ ಜೀವನವನ್ನು ಒದಗಿಸುವ ಪ್ರಯತ್ನವಾಗಿದೆ ಎಂದು ಪುನರುಚ್ಚರಿಸಿದ ಅವರು, 1995 ರಿಂದ ಸಿಎಎ ಇದೆ. ಕಳೆದ ವರ್ಷ ಜಾರಿಗೆ ತಂದ ತಿದ್ದುಪಡಿಯಿಂದ ಈ ಕಾಯ್ದೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅವರು ಹೇಳಿದರು.

ಸಿಎಎ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂದು ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳು ಹೇಳಿರುವುದನ್ನು ಉಲ್ಲೇಖಿಸಿದ ಅವರು,  

ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿದರು. 

 ರಾಜ್ಯ ವಿಧಾನಸಭೆಗಳಲ್ಲಿ ಈ ಸಂಬಂಧ ನಿರ್ಣಯಗಳನ್ನು ಅಂಗೀಕರಿಸಲಾಗಿದ್ದರೂ,  (ಸಿಎಎ ಅನುಷ್ಠಾನಕ್ಕೆ) ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಿಎಎ ಪೌರತ್ವವನ್ನು ಒದಗಿಸುವುದಾಗಿದ್ದು, ಅದು ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ. ಪೌರತ್ವವನ್ನು ಕಳೆದುಕೊಳ್ಳಬಹುದು ಎಂಬ ಆತಂಕ ಇರುವವರೊಂದಿಗೆ ಚಚರ್ಿಸಲು ನಾವು ಸಿದ್ಧರಿದ್ದೇವೆ ಎಂದು ಸೀತಾರಾಮನ್ ಹೇಳಿದರು.

ಸಿಎಎಯನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳನ್ನು ನೋಡುವಾಗ ಸಂಕಟವಾಗುತ್ತದೆ ಮತ್ತು ಕಣ್ಣೀರು  ತರಿಸುತ್ತದೆ ಎಂದು ಹೇಳಿದರು.

ಸಿಎಎ ವಿರುದ್ಧ ಮಾತನಾಡುವವರು, ನಿರಾಶ್ರಿತರ ಶಿಬಿರಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಸಿಎಎ ವಿರುದ್ಧ ಮಾತನಾಡುವವರು  

ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು. 

1964 ರಿಂದ 2008 ರವರೆಗೆ 4,00,000 ಕ್ಕೂ ಹೆಚ್ಚು ತಮಿಳರಿಗೆ (ಶ್ರೀಲಂಕಾದಿಂದ) ಭಾರತೀಯ ಪೌರತ್ವ ನೀಡಲಾಗಿದೆ 

ಎಂದು ಅವರು ಹೇಳಿದರು. 

2016 ರಿಂದ 2018 ರವರೆಗೆ 391 ಅಫ್ಘಾನಿಸ್ತಾನ ಮುಸ್ಲಿಮರು ಮತ್ತು 1,595 ಪಾಕಿಸ್ತಾನಿ ವಲಸಿಗರಿಗೆ ಪೌರತ್ವ ನೀಡಲಾಗಿದೆ ಎಂದು ಅವರು ಹೇಳಿದರು 

 2016 ರಲ್ಲಿ ಅದ್ನಾನ್ ಸಾಮಿಗೆ ಪೌರತ್ವ ನೀಡಲಾಯಿತು, ತಸ್ಲೀಮಾ ನಸ್ರೀನ್ ಅವರಿಗೂ ಪೌರತ್ವ ನೀಡಲಾಯಿತು, ಇಂತಹ ಹಲವು ಉದಾಹರಣೆ ನಮ್ಮ ಮುಂದಿದೆ. ಇದು ನಮ್ಮ ವಿರುದ್ಧದ ಎಲ್ಲಾ ಆರೋಪಗಳು ತಪ್ಪು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದರು.

2014 ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ 566 ಮುಸ್ಲಿಮರಿಗೆ ಪೌರತ್ವ ದೊರೆತಿದೆ ಎಂದು ಅವರು ಹೇಳಿದರು

ಕಳೆದ ಆರು ವರ್ಷಗಳಲ್ಲಿ 2,838 ಪಾಕ್ ನಿರಾಶ್ರಿತರು, 948 ಅಫಘಾನಿಸ್ತಾನಿಯರು ಮತ್ತು 172 ಬಾಂಗ್ಲಾದೇಶದ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲಾಯಿತು, ಇದರಲ್ಲಿ ಮುಸ್ಲಿಮರು ಇದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.