ಸಿಎಎ ಬಿಕ್ಕಟ್ಟು: ನ್ಯಾಯಾಧೀಶರಲ್ಲಿ ನಂಬಿಕೆಯಿಡಿ- ರಂಜನ್ ಗೊಗಾಯ್

ನವದೆಹಲಿ, ಫೆ 11,ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಉದ್ಭವಿಸಿರುವ  ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜನತೆ ಕೋರ್ಟ್ ಮತ್ತು  ನ್ಯಾಯಾಧೀಶರನ್ನು ನಂಬಬೇಕು, ವಿಶ್ವಾಸವಿಡಬೇಕು  ನಿವೃತ್ತ  ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ."ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ದೇಶದ ಮಹತ್ವದ  ವಿಷಯಗಳಲ್ಲಿ ಒಂದಾಗಿದೆ. ಸಮಸ್ಯೆಯ ಪರಿಹಾರವು ಸಾಂವಿಧಾನಿಕ ವಿಧಾನಗಳ ಮೂಲಕ ಆಗಬೇಕು  ಈ ವಿಷಯವು ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇದೆ. ಜನತೆ  ನ್ಯಾಯಾಧೀಶರನ್ನು ನಂಬಬೇಕು ವಿಶ್ವಾಸವಿಡಬೇಕು ಎಂದೂ ಅವರು   ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ .ಇದರ ವಿರುದ್ಧ ಪ್ರತಿಭಟನೆಗಳು  ಅಸ್ಸಾಂನಿಂದ ಹುಟ್ಟಿಕೊಂಡಿವೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕರ  ಮೂಲಭೂತ ಕರ್ತವ್ಯವಾಗಿದೆ ಎಂದೂ ಗೋಗಾಯ್  ಒತ್ತಿ ಹೇಳಿದರು.