ಮಾಸ್ಕ್ ಧರಿಸಿ ಎಂದ ಬಸ್ ಚಾಲಕನ ಪ್ರಾಣ ತೆಗೆದ ಮೂವರು ಪ್ರಯಾಣಿಕರು...!

ಬಯೊನ್ನೆ( ಫ್ರಾನ್ಸ್) ಜುಲೈ 11: ಬಸ್ ಏರಿದ  ಪ್ರಯಾಣಿಕರಿಗೆ   ಮುಖ ಗವುಸು  ಧರಿಸಲು ಸೂಚಿಸಿದ ಬಸ್ ಚಾಲಕನ ಮೇಲೆ  ಕುಪಿತಗೊಂಡ   ಮೂವರು   ಕಬ್ಬಿಣದ  ರಾಡುಗಳಿಂದ  ಮನಸೋಇಚ್ಚೆ ಥಳಿಸಿದರು.  ಇದರಿಂದ ತೀವ್ರ ಗಾಯಗೊಂಡ   ಚಾಲಕ  ಆಸ್ಪತ್ರೆಯಲ್ಲಿ   ಶುಕ್ರವಾರ  ಮೃತಪಟ್ಟಿದ್ದಾನೆ.  ತಮ್ಮ ಒಳಿತಿಗಾಗಿ ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೆ   ವ್ಯಕ್ತಿಯ  ಪ್ರಾಣವನ್ನು  ತೆಗೆದ  ಘಟನೆ   ಫ್ರಾನ್ಸ್ ನಲ್ಲಿ ನಡೆದಿದೆ. 

೫೯ ವರ್ಷದ ಫಿಲಿಪ್   ಮಂಗಿಲ್ಲಾಟ್   ವೃತ್ತಿಯಲ್ಲಿ  ಬಸ್ ಚಾಲಕರಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಫ್ರಾನ್ಸ್  ಬಯೋನ್ನೆ ನಗರದಲ್ಲಿ  ಬಸ್  ಓಡಿಸುತ್ತಾರೆ. ಈ ಕ್ರಮವಾಗಿ  ವಾರದ ಹಿಂದೆ,   ತನ್ನ ಬಸ್  ಹತ್ತಿದ   ಮೂವರು  ಪ್ರಯಾಣಿಕರು   ಮಾಸ್ಕ್ ಧರಿಸಿರಲಿಲ್ಲ,  ಕೂಡಲೇ ಮಾಸ್ಕ್  ಧರಿಸುವಂತೆ  ಫಿಲಿಪ್ಸ್  ಸೂಚಿಸಿದರು. ಮಾಸ್ಕ್  ಧರಿಸದಿದ್ದರೆ  ಬಸ್ಸು ಮುಂದೆ  ಹೋಗುವುದಿಲ್ಲ  ಎಂದು ಎಚ್ಚರಿಸಿ...  ಇಲ್ಲಿಯೇ   ಕೆಳಗಿಳಿಸುತ್ತೇನೆ ಎಂದು  ತಾಕೀತು ಮಾಡಿದರು.  ಇದರಿಂದ  ಕ್ರೋಧಗೊಂಡ  ಮೂವರು  ಫಿಲಿಪ್ಸ್ ಅವರ ಮೇಲೆ  ರಾಡುಗಳಿಂದ  ಮನಸೋಇಚ್ಚೆ ಧಳಿಸಿದರು. ಇದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು   ಪ್ರಜ್ಞಾಹೀನ ಸ್ಥಿತೆಗೆ ತಲುಪಿದಾಗ  ದುಷ್ಕರ್ಮಿಗಳು ಸ್ಥಳದಿಂದ  ಪರಾರಿಯಾಗಿದ್ದರು.

ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಫಿಲಿಪ್‌ರನ್ನು ಆಸ್ಪತ್ರೆಗೆ ಸಾಗಿಸಿ, ವಿಷಯವನ್ನು ಅವರ ಕುಟುಂಬಕ್ಕೆ ತಿಳಿಸಿದರು.    ತಲೆಗೆ  ತೀವ್ರ ಪೆಟ್ಟಿನಿಂದಾಗಿ   ಫಿಲಿಪ್   ಮೆದುಳು ನಿಷ್ಕ್ರಿಯೆಗೊಂಡು  ಕೋಮಾ ಸ್ಥಿತಿಗೆ  ತಲುಪಿದ್ದರು. ಶುಕ್ರವಾರ ಕುಟುಂಬ ಸದಸ್ಯರ  ಒಪ್ಪಿಗೆಯೊಂದಿಗೆ  ವೆಂಟಿಲೇಟರ್ ತೆಗೆದ ಕೆಲ ಸಮಯದಲ್ಲಿ  ಫಿಲಿಪ್ ಮೃತಪಟ್ಟರು  ಎಂದು ಪೊಲೀಸರು ತಿಳಿಸಿದ್ದಾರೆ. ಫಿಲಿಪ್ ಮೇಲೆ ಹಲ್ಲೆ ನಡೆಸಿದ ಮೂವರ ವಿರುದ್ಧ  ಹತ್ಯೆ  ಪ್ರಕರಣ ದಾಖಲಿಸಿ  ಅವರ ಪತ್ತೆಗೆ  ಕಾರ್ಯಾಚರಣೆ  ನಡೆಸುತ್ತಿದ್ದಾರೆ.