ಲೋಕದರ್ಶನ ವರದಿ
ಬೆಳಗಾವಿ : ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರಕ್ಕೆ ಬರುತ್ತಿದ್ದಂತೆ ಗಡಿವಿವಾದಕ್ಕೆ ಮತ್ತೊಮ್ಮೆ ಜೀವ ಬಂದಂತಾಗಿದ್ದು, ಎರಡೂ ರಾಜ್ಯಗಳಲ್ಲಿ ನಾಯಕರು ನೀಡುವ ಹೇಳಿಕೆಗಳ ಆಧಾರದ ಮೇಲೆ ಪ್ರತಿಭಟನೆಗಳು ಆರಂಭಗೊಂಡಿವೆ.
ಇತ್ತೀಚಿಗಷ್ಟೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕರೆ ಬೆಳಗಾವಿಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು. ಇದರಿಂದ ಕನರ್ಾಟಕದ ಗಡಿಯಲ್ಲಿ ಆಕ್ರೋಶದ ವಾತಾವರಣ ನಿಮರ್ಾಣಗೊಂಡಿತ್ತು. ರಾಜಕೀಯ ನಾಯಕರೂ ಸೇರಿ ಹಲವು ಕನ್ನಡ ಮುಖಂಡರು ಉದ್ಧವ ಠಾಕ್ರೆ ಹೇಳಿಕೆ ಖಂಡಿಸಿದ್ದರು.
ಎರಡು ದಿನಗಳ ಹಿಂದೆ, ಕನರ್ಾಟಕ ನವನಿಮರ್ಾಣ ಸೇನೆ ರಾಜ್ಯ ಅಧ್ಯಕ್ಷ ಭೀಮಾಶಂಕರ ಪಾಟೀಲ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಉದ್ಧವ ಹೇಳಿಕೆ ಟೀಕಿಸಿ ರೈಲ್ವೆ ಆಸ್ತಿ ಹಾನಿ ಮಾಡಿದವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳುವ ನೀವು, ಹಲವು ದಶಕಗಳಿಂದ ಅನೇಕ ಬಾರಿ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾನಿ ಮಾಡಿರುವ ಎಂಇಎಸ್ನವರಿಗೆ ಗುಂಡು ಹಾಕುವಂತೆ ಏಕೆ ಹೇಳುವುದಿಲ್ಲ. ಮರಾಠಿಗರ ಬಗ್ಗೆ ಈ ಮೃದುತ್ವ ಏಕೆ ಎಂದು ಪ್ರಶ್ನಿಸಿದ್ದರು.
ಭೀಮಾಶಂಕರ ಪಾಟೀಲ ಈ ಹೇಳಿಕೆ ಕೆಲವು ಮಾಧ್ಯಮಗಳಲ್ಲಿ ಎಂಇಎಸ್ನವರ ಮೇಲೆ ಗುಂಡು ಹಾರಿಸಲಿ ಎಂದು ಹೇಳಿದ್ದಾರೆ ಎಂಬಂತೆ ಬಿತ್ತರಗೊಂಡಿತು. ಇದರಿಂದ ಆಕ್ರೋಶಗೊಂಡ ಮರಾಠಿಗರು ಶನಿವಾರ ಮುಂಜಾನೆ ಕೊಲ್ಲಾಪುರದಲ್ಲಿ ಕನ್ನಡ ಧ್ವಜ ಸುಟ್ಟು ವಿಕೃತಿ ಮೆರೆದರು. ಈ ಘಟನೆಯ ನಂತರ ಕನರ್ಾಟಕ ಗಡಿಭಾಗದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿಮರ್ಾಣ ಆಗಿದೆ.
ಬೆಳಗಾವಿಯಲ್ಲಿ ಶನಿವಾರ ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬೆಳಗಾವಿ ಪ್ರವಾಸಿ ಮಂದಿರದಿಂದ ಘೋಷಣೆ ಕೂಗುತ್ತ ಹೊರಟು ಅಶೋಕ ವೃತ್ತದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಪ್ರತಿಕೃತಿ ದಹಿಸಿದರು. ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿಯೂ ಪ್ರತಿಭಟನೆ ಆರಂಭಗೊಂಡಿದ್ದು, ಇದು ಇನ್ನೂ ಕೆಲವು ದಿನಗಳ ವರೆಗೆ ಮುಂದುವರಿಯಲಿದೆ. ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕನರ್ಾಟಕ-ಮಹಾರಾಷ್ಟ್ರ ಗಡಿಯಲ್ಲಿನ ಕೋಗನೊಳ್ಳಿ ಟೋಲ್ ನಾಕಾದಲ್ಲಿ ಭಾರೀ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಸದ್ಯದಲ್ಲೇ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕನ್ನಡ ಮುಖಂಡರು ನೀಡುವ ಹೇಳಿಕೆಗಳು ಮತ್ತು ಪ್ರತಿಭಟನೆಗಳು ಎಂಇಎಸ್ ಪಾಲಿಗೆ ಮರಾಠಿ ಮತಗಳನ್ನು ಒಂದುಗೂಡಿಸಲು ಸಹಕಾರಿಯಾಗಲಿದ್ದು, ತಾನಾಗಿಯೇ ಒಲಿದು ಬಂದ ಈ ಅವಕಾಶವನ್ನು ಎಂಇಎಸ್ ಎಲ್ಲ ರೀತಿಯಿಂದ ಬಳಸಿಕೊಳ್ಳಲು ಪ್ರಯತ್ನ ನಡೆಸಲಿದೆ.