ಮನೆಗಳ್ಳನ ಬಂಧನ: ಚಿನ್ನಾಭರಣ ವಶ

ಬೆಂಗಳೂರು, ಜ 29  ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ  ವ್ಯಕ್ತಿಯನ್ನು ಉತ್ತರ ವಿಭಾಗದ  ಪೊಲೀಸರು ಬಂಧಿಸಿ, 456 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಉದಯ್ ಅಲಿಯಾಸ್ ನೀರು ಮಜ್ಜಿಗೆ (34)ಬಂಧಿತ ಆರೋಪಿ . 

ಬಂಧಿತನಿಂದ ಪೊಲೀಸರು16 ಲಕ್ಷ ರೂ ಮೌಲ್ಯದ  466 ಗ್ರಾಂ ಆಭರಣ ವಶಪಡಿಸಿಕೊಂಡಿದ್ದಾರೆ. ಮುತ್ಯಾಲನಗರದ ಹರಿದಾಸನ್  ಎಂಬುವವರು ಇದೇ ತಿಂಗಳ 21ರಂದು ರಾತ್ರಿ10.30ರ ಸುಮಾರಿಗೆ ತಮ್ಮ ಮನೆಯ  ಬಾಗಿಲಿನಿಂದ ಒಳಪ್ರವೇಶಿಸಿ, ಲಾಕರ್ ಒಡೆದು ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಆರೋಪಿ ಜೈಲಿನಿಂದ ಬಿಡುಗಡೆ ಗೊಂಡ ನಂತರ ತನ್ನ ಸಹಚರ ಸಂತೋಷ ಎಂಬುವವನೊಂದಿಗೆ ಸೇರಿ  ಹಗಲು , ರಾತ್ರಿ ಯಾರು ಇಲ್ಲದ ಮನೆಯನ್ನು ಹೊಂಚು ಹಾಕಿ,‌ ಮನೆಯ ಬೀಗ ಮುರಿದು, ಚಿನ್ನಾಭರಣ ದೋಚಿ ಪರಾರಿಯಾಗುತ್ತಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಬಂಧನದಿಂದ ವಿವಿಧ ಠಾಣೆಯಲ್ಲಿ ದಾಖಲಾಗಿದ್ದ ಐದು ಮನಗಳ್ಳತನ ಪ್ರಕರಣಗಳು ಇತ್ಯಾರ್ಥವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.