ಧಾರವಾಡ.26: ಕಳೆದ ಮಾಚರ್್ 19 ರಂದು ಧಾರವಾಡ ಕುಮಾರೇಶ್ವರ ನಗರದಲ್ಲಿ ಸಂಭವಿಸಿದ ಕಟ್ಟಡ ಕುಸಿತ ಪ್ರಕರಣದ ಜೀವರಕ್ಷಣಾ ಕಾರ್ಯದಲ್ಲಿ ಧಾರವಾಡ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಆರೋಗ್ಯ ಸಂಸ್ಥೆಗಳು ತ್ವರಿತ ಮತ್ತು ಸಕಾಲಿಕ ಸೇವೆ ಸಲ್ಲಿಸುವ ಮೂಲಕ ಗಾಯಾಳುಗಳ ಜೀವರಕ್ಷಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿವೆ.
ದುರಂತ ನಡೆದ ತಕ್ಷಣದಿಂದಲೇ ಎಂಟು ಆರೋಗ್ಯ ಕವಚ '108' ವಾಹನಗಳು, ದೇಶಪಾಂಡೆ ಫೌಂಡೇಶನ್ ಸಂಸ್ಥೆ ಹುಬ್ಬಳ್ಳಿಯ ಒಂದು ವಾಹನ, ಪ್ರಾಥಮಿಕ ಆರೋಗ್ಯ ಕೇಂದ್ರಗಳ 5 ವಾಹನಗಳು, ಡಾ|| ರಾಮನಗೌಡರ ಆಸ್ಪತ್ರೆ ಧಾರವಾಡದ 2 ವಾಹನಗಳು, ಇರಕಲ್ ಆಸ್ಪತ್ರೆ ಧಾರವಾಡದ ಒಂದು ವಾಹನ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಒಂದು ವಾಹನ ಹೀಗೆ ಅವಳಿ ನಗರದಲ್ಲಿ ಲಭ್ಯವಿದ್ದ ಎಲ್ಲ ವಾಹನಗಳನ್ನು ಉಪಯೋಗಿಸಿಕೊಂಡು ವ್ಯವಸ್ಥಿತವಾಗಿ ಗಾಯಾಳುಗಳನ್ನು ತ್ವರಿತವಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡುವ ಏಪರ್ಾಡು ಮಾಡಲಾಯಿತು.
ಪ್ರತಿನಿತ್ಯ ಹಗಲು ಮತ್ತು ರಾತ್ರಿ ಒಬ್ಬರು ತಾಲೂಕಾ ಆರೋಗ್ಯಾಧಿಕಾರಿಗಳು, ಒಬ್ಬರು ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ಇಬ್ಬರು ವೈದ್ಯಾಧಿಕಾರಿಗಳು ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸಿದರು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಎಲ್ಲ ಫಿಜಿಶಿಯನ್ಗಳು, ಎಲುಬು ಮತ್ತು ಕೀಲು ತಜ್ಞರು, ಶಸ್ತ್ರಚಿಕಿತ್ಸಕರು ಮತ್ತು ಅರವಳಿಕೆ ತಜ್ಞರು ನಿರಂತರವಾಗಿ ಹಾಜರಿದ್ದು, ಗಾಯಾಳುಗಳ ಆರೋಗ್ಯ ತಪಾಸಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ, ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದರು.
ಕಟ್ಟಡ ಕುಸಿತದ ಘಟನಾ ಸ್ಥಳದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಸಿಲಿಂಡರ್ಗಳನ್ನು, ಫ್ಲೋ ಮೀಟರ್ಗಳನ್ನು, ಓ.ಆರ್.ಎಸ್ ಪ್ಯಾಕೇಟ್ಗಳು, ಓ.ಆರ್.ಎಸ್ ಟೆಟ್ರಾ ಪ್ಯಾಕೇಟ್ಗಳು, ಮಾಸ್ಕ್ಗಳು-ಎನ್95 ಮತ್ತು ಇಲಾಸ್ಟಿಕ್ ಮಾಸ್ಕ್ಗಳು, ಬ್ಯಾಟರಿಗಳು, ಔಷಧಿಗಳು, ಬ್ಯಾಂಡೇಜ್ ಬಟ್ಟೆ ಹಾಗೂ ಸಲೈನ್ ಬಾಟಲಿಗಳನ್ನು ಕ್ರೋಢಿಕರಿಸಲಾಯಿತು.
ಈ ಕಾಯರ್ಾಚರಣೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ಎಂ. ದೊಡ್ಡಮನಿ ಖುದ್ದಾಗಿ ಹಾಜರಿದ್ದು ಎಲ್ಲ ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಧಾರವಾಡ ತಾಲೂಕಾ ಆರೋಗ್ಯಾಧಿಕಾರಿಗಳು, ಡಿಮಾನ್ಸ ಸಂಸ್ಥೆಯ ಶುಶ್ರೂಷಕಿಯರ ಹಾಗೂ ಇರಕಲ್ ನಸರ್ಿಂಗ್ ಕಾಲೇಜಿನ ಶುಶ್ರೂಷಕಿಯರ ಸೇವೆಯನ್ನು ಬಳಸಿಕೊಂಡು ಚಿಕಿತ್ಸೆ ಮತ್ತು ಮೇಲ್ವಿಚಾರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಿರಿಯ ಮತ್ತು ಹಿರಿಯ ಆರೋಗ್ಯ ಸಹಾಯಕರ, ಔಷಧ ತಜ್ಞರ, ಪ್ರಯೋಗಾಲಯ ತಜ್ಞರ ಮತ್ತು 'ಡಿ' ವರ್ಗದ ನೌಕರರ ಸೇವೆಯನ್ನು ಬಳಸಿಕೊಳ್ಳಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾಯರ್ಾಲಯದ ಎಲ್ಲಾ ವರ್ಗದ ಪ್ಯಾರಾಮೆಡಿಕಲ್ ಸಿಬ್ಬಂದಿಯು ಅವಿರತವಾಗಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸುವಲ್ಲಿ ಮತ್ತು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡುವಲ್ಲಿ ಸಮಯ ಹಾಗೂ ಕರ್ತವ್ಯ ಪ್ರಜ್ಞೆಯನ್ನು ಮೆರೆದರು. ಧಾರವಾಡದ ಜಿಲ್ಲಾಸ್ಪತ್ರೆ, ಸತ್ತೂರಿನ ಎಸ್ಡಿಎಂ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಕಾರ್ಯ ಮುಂದುವರೆದಿದೆ