ಸ್ವಾಸ್ಥ್ಯ ಸಮಾಜ ನಿರ್ಮಾಣ ಅಗತ್ಯ: ಸಮುದಾಯದ ಆರೋಗ್ಯ ಕೇಂದ್ರದ ಅಗಸಿಮನಿ

ಲೋಕದರ್ಶನ ವರದಿ

ಗಜೇಂದ್ರಗಡ: ಪಟ್ಟಣದ ಮೈಸೂರು  ಮಠ (ಚೌಕಿ)ದಲ್ಲಿ ಜರುಗಿದ 171 ಸಾಹಿತ್ಯ ಗೋಷ್ಠಿಯಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತಾ ಮದ್ಯಪಾನ ಮಾಡುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಇದು ವಿಷಾದನೀಯ ಸಂಗತಿ.  ವ್ಯಸನ ಮುಕ್ತ  ಆರೋಗ್ಯಪೂರ್ಣ ಸಮಾಜ ರೂಪಿಸುವಲ್ಲಿ ಆರೋಗ್ಯ ಸಮುದಾಯಗಳು ಅತ್ಯಂತ ಪ್ರಭಾವಿ ಹಾಗೂ ಪರಿಣಾಮಕಾರಿ ಮಾಧ್ಯಮ ಎಂದು ಸಮುದಾಯದ ಆರೋಗ್ಯ ಕೇಂದ್ರದ ಎ ಎ ಅಗಸಿಮನಿಯವರು ಹೇಳಿದರು. 

ಸಾಹಿತ್ಯ ಚಿಂತನಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಂಜುಳಾ ಐ ರೇವಡಿ ಮಾತನಾಡುತ್ತಾ ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು, ಅವರನ್ನು ಸರಿದಾರಿಗೆ ತಂದು ವ್ಯಸನಮುಕ್ತರನ್ನಾಗಿ ಮಾಡುವಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳು ಪರಿಣಾಮಕಾರಿ ಸಂದೇಶ ನೀಡುತ್ತಾ ಬಂದಿದೆ. ಮದ್ಯಪಾನದ ಬಗ್ಗೆ ಪ್ರತಿಭಟನೆ ಮತ್ತು ವಿರೋಧಕ್ಕಿಂತ ಮನಃಪರಿವರ್ತನೆ ಮಾಡುವುದು ಅಗತ್ಯವಾಗಿದೆ.   ಆರೋಗ್ಯಪೂರ್ಣ ಸಮಾಜ ನಿಮರ್ಾಣ ಆದಾಗ ಮಾತ್ರ ಸಮಾಜದ ಎಲ್ಲ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನಿಮರ್ಾಣವಾಗಲು ಸಾಧ್ಯ. ಸಮಾಜದಲ್ಲಿ ಸಾಹಿತ್ಯವೇ ಇರದಿದ್ದರೆ ನಮಗೆ ಸಂಸ್ಕೃತಿಯ ಅರಿವು ಆಗುತ್ತಿರಲಿಲ್ಲ. ಅಲ್ಲದೆ ಪುರಾತನ ಕಾಲದ ಆಯುರ್ವೇದದ ಗ್ರಂಥಗಳಿಂದ ಇಂದು ಹಲವಾರು ಔಷಧಿಗಳನ್ನು ಕಂಡು ಹಿಡಿಯುವಲ್ಲಿ ಸಾಧ್ಯವಾಗಿದೆ. ಹಲವಾರು ಸಸ್ಯಗಳು ಅಳಿವಿನಂಚಿಲ್ಲಿದ್ದು ಅವುಗಳನ್ನು ಗುರುತಿಸಿ, ಸಂರಕ್ಷಿಸಿ, ಪೋಷಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಬಸವರಾಜ ಮುನವಳ್ಳಿ, ಎಸ್ ಕೆ ಕವಡಿಮಟ್ಟಿ, ಶರಣಮ ಅಂಗಡಿ,  ವಿನಾಯಕ ಕರ್ಣಿ ಮಹಾಂತೇಶ ಅಂಗಡಿ, ಶಂಕರ ಕಲ್ಲಿಗನೂರ, ಎಮ್ ಎಸ್ ಮಕಾನದಾರ, ಎಸ್ ಎಸ್ ನರೇಗಲ್, ಗಾರವಾಡಹಿರೇಮಠ, ಶರಣಪ ಬೇವಿನಕಟ್ಟಿ, ದಾನಮ್ಮ ಪಟ್ಟೇದ, ಚೈತ್ರಾ ವಿಶ್ವಬ್ರಾಹ್ಮಣ, ಕೆ ಜಿ ಸಂಗಟಿಯವರು ಉಪಸ್ಥಿತರಿದ್ದರು.