ರಾಣೇಬೆನ್ನೂರು06: ರಾಜ್ಯ ಸರ್ಕಾರ ದ ಮುಖ್ಯಮಂತ್ರಿ ಯಡಿಯೂರಪ್ಪನವರ ಮಂಡಿಸಿದ ಬಜೆಟ್ ಅಭಿವೃದ್ಧಿಪರ ಮತ್ತು ದೂರದೃಷ್ಠಿಯಿಂದ ಕೂಡಿದೆ. ಸಮಪಾಲು-ಸಮಬಾಳು ಎನ್ನುವ ತತ್ವದಂತೆ ಸರ್ವತೋಮುಖ ಅಭಿವೃದ್ಧಿಗೆ ಮಂಡಿಸಿದ ಬಜೆಟ್ ಸಾಕ್ಷಿಯಾಗಿದೆ. ರಾಜ್ಯದ ನಿರೀಕ್ಷೆಯಂತೆ ಕೃಷಿಗೆ ಅತೀವ ಪ್ರಾಧಾನ್ಯತೆ ನೀಡಿದ್ದಾರೆ. ಇದು ಸಂತೋಷದ ಸಂಗತಿಯಾಗಿದೆ. ಕಾರ್ಮಿಕ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಟ್ಟಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ತೆಗೆದಿರಿಸಿದ ಬಜೆಟ್ನಿಂದ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಪರಿಪೂರ್ಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ.