ಬೂದನೂರು ಹೊನ್ನತ್ತೆಮ್ಮ ದೇವಿ ಜಾತ್ರಾ ಸಂಭ್ರಮ
ಹೂವಿನಹಡಗಲಿ 19: ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಮೂರು ವರ್ಷಗಳ ಬಳಿಕ ಹೊನ್ನತ್ತೆಮ್ಮ ದೇವಿ ಜಾತ್ರೋತ್ಸವ ಮಂಗಳವಾರ ಸಡಗರ ಸಂಭ್ರಮದಿಂದ ಜರುಗಿತು. ಸಂಪ್ರದಾಯಕ ಪೂಜೆ ನೆರವೇರಿಸಿದ ಬಳಿಕ ಬೆಳಗಿನ ಜಾವ ಹೊನ್ನತ್ತೆಮ್ಮ ದೇವಿ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಸಕಲ ವಾದ್ಯಗಳ ಹಲಗೆ, ಡೊಳ್ಳ ಕುಣಿತ ಮೆರವಣಿಗೆ ಮೂಲಕ ಚೌಕಮನೆ ಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಯಿತು.
ಬುಧವಾರ ಬೆಳಿಗ್ಗೆ ಮದ್ದು ಸುಡುವ ಮತ್ತು ಹಲಗೆ.ಡೊಳ್ಳು ಕುಣಿತ ಸೇರಿದಂತೆ ಜಾನಪದ ವಾದ್ಯ ಗಳು ಮೆರುಗು ನೀಡಿದವು. ದೇವಿಗೆ ಬೆಳ್ಳಿ ಆಭರಣಗಳಿಂದ ಅಲಂಕಾರ ಮಾಡಲಾಯಿತು. ವಿಶೇಷ ಪೂಜೆ ಬಳಿಕ ಮಳೆ.ಬೆಳೆ ಸಮ್ರದ್ದಿಗಾಗಿ ಪ್ರಾರ್ಥಿಸಿ ಗ್ರಾಮದ ಸುತ್ತಲೂ ಹುಲಸು ಚೆಲ್ಲಾಯಿತು. ಬೆಳಗಿನ ಜಾವದಲ್ಲಿ ಚೌಕ ಮನೆ ಕಟ್ಟೆಯಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಹರಕೆ ತೀರಿಸಿದರು. ಬೇವಿನ ಉಡುಗೆ ತೊಟ್ಟು ದೇವಸ್ಥಾನದ ಆವರಣದಲ್ಲಿ ವಿಸರ್ಜಿಸಿದರು.
ಜಾತ್ರೋತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ರುವ ಎಲ್ಲಾ ದೇವಸ್ಥಾನಗಳಿಗೆ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು.ದೇವಿಯ ಹೆಸರಿನಲ್ಲಿಹೆಚ್ಚು ಕುರಿ ಮತ್ತು ಕೋಳಿಗಳ ಬಲಿ ನೀಡಲಾಯಿತು. ಗ್ರಾಮದಲ್ಲಿ ಜನಾಂದವರು ಕೋಮು ಸೌಹಾರ್ದತೆಯಿಂದ ಸಂಭ್ರಮದಿಂದ ಆಚರಿಸಿದರು. ದೇವಿ ಜಾತ್ರೆ ನಿಮಿತ್ತ ಸ್ಥಳೀಯ ಕಲಾವಿದರಿಂದ ನಾಟಕ ಪ್ರದರ್ಶನ ಕಂಡಿತು.